ಕಿಟಕಿಯ ಗ್ರಿಲ್‌ ಮುರಿದು ಮನೆಗೆ ನುಗ್ಗಿ ಕಳ್ಳರು-30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 30 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆಗಳನ್ನು ಕಳವು ಮಾಡಿರುವ ಘಟನೆ ಬಿಜೈ ನ್ಯೂರೋಡ್‌ನ‌ ಸಂಕೈಗುಡ್ಡದಲ್ಲಿ ನಡೆದಿದೆ.

ನ.24ರ ರಾತ್ರಿ 11.30ರಿಂದ ನ.25ರ ಬೆಳಗ್ಗೆ 6 ಗಂಟೆಯ ನಡುವೆ ಈ ಘಟನೆ ನಡೆದಿದ್ದು, ಮನೆಯ ಬೆಡ್‌ರೂಂನ ಕಿಟಕಿಯ ಗ್ರಿಲ್ಸ್‌ನ್ನು ತುಂಡರಿಸಿ ಕಳ್ಳರು ಮನೆ ಪ್ರವೇಶಿಸಿದ್ದಾರೆ. ಬೆಡ್‌ರೂಂ ಕಪಾಟಿನಲ್ಲಿದ್ದ ಅಂದಾಜು 16 ಗ್ರಾಂ ತೂಕದ ಒಂದು ಜತೆ ಕಿವಿಯ ಓಲೆ, 144 ಗ್ರಾಂ ತೂಕದ 4 ಚಿನ್ನದ ನೆಕ್ಲೆಸ್‌, 40 ಗ್ರಾಂ ತೂಕದ ಚಿನ್ನದ ಸರ, 48 ಗ್ರಾಂ ತೂಕದ ಚಿನ್ನದ ಹಾರ, 24 ಗ್ರಾಂ ತೂಕದ ಹವಳದ ಸರ, 40 ಗ್ರಾಂ ತೂಕದ ಚಿನ್ನದ ಸರ ಮತ್ತು 36 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಲಗಿದೆ.

LEAVE A REPLY

Please enter your comment!
Please enter your name here