ಮಂಗಳೂರು (ಸೂರತ್): ಕೈಗಾರಿಕೋದ್ಯಮಿ ಅಶ್ವಿನ್ ದೇಸಾಯಿ ಒಡೆತನದ ಸೂರತ್‌ನ ಈಥರ್ ಇಂಡಸ್ಟ್ರೀಸ್‌ನ ಉತ್ಪಾದನಾ ಸ್ಥಳದಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಏಳು ಕಾರ್ಮಿಕರು ಮೃತಪಟ್ಟು, 27 ಮಂದಿ ಗಾಯಗೊಂಡಿದ್ದಾರೆ.
ನ.29ರಂದು ಈ ಘಟನೆ ನಡೆದಿದ್ದು, ಏಳು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಸ್ಥಳದಲ್ಲಿ ಇಂದು ಕೂಲಿಂಗ್ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುವ ವೇಳೆ 7 ಶವಗಳು ಪತ್ತೆಯಾಗಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ರಾಸಾಯನಿಕ ಶೇಖರಣಾ ತೊಟ್ಟಿಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ತನಿಖೆ ಬಳಿಕ ಸ್ಪಷ್ಟ ಕಾರಣ ತಿಳಿದು ಬರಲಿದೆ ಎಂದು ಸೂರತ್ ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.