ನಿಂತಿದ್ದ ಟ್ರಕ್‌ಗೆ ವ್ಯಾನ್ ಡಿಕ್ಕಿ – 8 ಮಂದಿ ಸಾವು, 7 ಜನರಿಗೆ ಗಾಯ

ಮಂಗಳೂರು (ಒಡಿಶಾ): ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 7 ಜನರು ಗಂಭೀರ ಗಾಯಗೊಂಡಿರುವ ಭೀಕರ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 20ರಲ್ಲಿ ಸಂಭವಿಸಿದೆ.

ಡಿ.1ರಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಗಂಜಾಂನ ದಿಗಪಹಂಡಿ ನಿವಾಸಿಗಳು ಎನ್ನಲಾಗಿದೆ.ಗಂಜಾಂ ಜಿಲ್ಲೆಯಿಂದ ಕಿಯೋಂಜಾರ್ ಜಿಲ್ಲೆಯ ಘಾಟ್‌ಗಾಂವ್ ಪ್ರದೇಶದ ಮಾ ತಾರಿಣಿ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಾನ್‌ನಲ್ಲಿ 20 ಜನರಿದ್ದು, ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ವ್ಯಾನ್ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಲಿಜೋಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here