ಇತಿಹಾಸ ನಿರ್ಮಿಸಿ, 2024ರ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದ ಉಗಾಂಡ

ಮಂಗಳೂರು (ಹೊಸದಿಲ್ಲಿ): ಆಫ್ರಿಕಾ ಪ್ರಾಂತ್ಯದ ಕೊನೆಯ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ರುವಾಂಡ ತಂಡವನ್ನು ಪರಾಭವಗೊಳಿಸಿ, 2024ರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಗೆ ಅರ್ಹತೆ ಪಡೆಯುವ ಮೂಲಕ ಉಗಾಂಡ ತಂಡವು ಇತಿಹಾಸ ನಿರ್ಮಿಸಿದೆ. ಆ ಮೂಲಕ ನಮೀಬಿಯಾದೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದ ಎರಡನೇ ಆಫ್ರಿಕಾ ತಂಡವಾಗಿ ಉಗಾಂಡ ಹೊರಹೊಮ್ಮಿದೆ.

ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗಮನಾರ್ಹ ಗೆಲುವು ಸಾಧಿಸುವ ಮೂಲಕ, ಆಫ್ರಿಕಾ ಪ್ರಾಂತ್ಯದಿಂದ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯಲಿರುವ ಎರಡು ತಂಡಗಳ ಪೈಕಿ ಉಗಾಂಡವು ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದೆ. ಇದರಿಂದಾಗಿ, 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಓಮನ್, ನೇಪಾಳ, ಪಪುವ ನ್ಯೂ ಗಿನಿಯ ಹಾಗೂ ಕೆನಡಾ ತಂಡಗಳೊಂದಿಗೆ ಮತ್ತೊಂದು ಆಫ್ರಿಕಾ ತಂಡವಾಗಿ ನಮೀಬಿಯಾ ಕೂಡಾ ಅರ್ಹತೆ ಗಿಟ್ಟಿಸಿದೆ. ಅತಿಥಿ ದೇಶ ಎಂಬ ಕಾರಣಕ್ಕೆ ಅಮೆರಿಕಾ ಕೂಡಾ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here