ಮಂಗಳೂರು ಬಂದರ್‌ಗೆ ಆಗಮಿಸಿದ ಐಶಾರಾಮಿ ಪ್ರವಾಸಿ ಹಡಗು

ಮಂಗಳೂರು: ನವ ಮಂಗಳೂರು ಬಂದರ್‌ಗೆ ಡಿ.8ರಂದು ಐಶಾರಮಿ ವಿದೇಶಿ ಪ್ರವಾಸಿ ಹಡಗು ಆಗಮಿಸಿದೆ. ಬಹಾಮಾಸ್‌ನಿಂದ 500 ಪ್ರಯಾಣಿಕರು ಮತ್ತು 350 ಸಿಬ್ಬಂದಿಗಳೊಂದಿಗೆ ಆಗಮಿಸಿದ ಸೆವೆನ್ ಸೀಸ್ ನ್ಯಾವಿಗೇಟರ್ ಹಡಗಿಗೆ ನವ ಮಂಗಳೂರು ಬಂದರಿನಲ್ಲಿ ಅದ್ದೂರಿ ಸ್ವಾಗತ ಕೋರಿ ಕರಾವಳಿಯ ಸಾಂಪ್ರದಾಯಿಕ ಕಲೆಗಳೊಂದಿಗೆ ಬರಮಾಡಿಕೊಳ್ಳಲಾಯಿತು.

ಪ್ರವಾಸಿಗರು ಕಾರ್ಕಳದ ಗೊಮ್ಮಟೇಶ್ವರ ಮೂರ್ತಿ, ಮೂಡಬಿದ್ರೆಯ ಸಾವಿರ ಕಂಬ, ಗೋಕರ್ಣನಾಥ ದೇವಸ್ಥಾನ, ಸಂತ ಅಲೋಶಿಯಸ್ ಚಾಪೆಲ್, ಮಂಗಳೂರು ಮಾರುಕಟ್ಟೆ ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಹಡಗು ಕೊಚ್ಚಿನ್‌ಗೆ ತೆರಳಿತು.

LEAVE A REPLY

Please enter your comment!
Please enter your name here