ಸಂಸತ್ ಭವನದ ಹೊರಗಡೆ ಪ್ರತಿಭಟನೆ ಮಾಡುತ್ತಿದ್ದ ಇಬ್ಬರ ಬಂಧನ-ಭಾರತ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬ ಬಂಧಿತ ಮಹಿಳೆ

ಮಂಗಳೂರು(ಹೊಸದಿಲ್ಲಿ): ಲೋಕಸಭೆಯ ಕಲಾಪದ ವೇಳೆ ಭಾರೀ ಭದ್ರತಾ ವೈಫಲ್ಯ ಉಂಟಾಗಿದ್ದು, ಇಬ್ಬರು ವ್ಯಕ್ತಿಗಳು ಸದನದ ಬಾವಿಯೊಳಗೆ ಇಳಿದು ಸಂಸದರತ್ತ ಹಳದಿ ಗ್ಯಾಸ್ ಸಿಡಿಸಿದ್ದಾರೆ. ಹಳದಿ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಬಳಸಿ ಸಂಸತ್ತಿನ ಕಟ್ಟಡದ ಹೊರಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರನ್ನು ನೀಲಂ (42) ಮತ್ತು ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಸಾರಿಗೆ ಭವನದ ಮುಂಭಾಗದಲ್ಲಿ ಬಂಧಿಸಲಾಗಿದೆ.

“ನನ್ನ ಹೆಸರು ನೀಲಂ.. ಭಾರತ ಸರ್ಕಾರ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಮತ್ತು ನಮ್ಮ ಹಕ್ಕುಗಳನ್ನು ಕೇಳಿದರೆ ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿ ಚಿತ್ರಹಿಂಸೆ ನೀಡಲಾಗುತ್ತಿದೆ. ನಮಗೆ ಬೇರೆ ಮಾಧ್ಯಮ ಇಲ್ಲ. ನಾವು ವಿದ್ಯಾರ್ಥಿಗಳು. ನಮಗೆ ಉದ್ಯೋಗಗಳಿಲ್ಲ. ನಾವು ಯಾವುದೇ ಸಂಘಟನೆಯೊಂದಿಗೆ ಸಂಬಂಧ ಹೊಂದಿಲ್ಲ. ಸರ್ವಾಧಿಕಾರ ನಿಲ್ಲಿಸಿ…” ಎಂದು ಬಂಧಿತ ನೀಲಂ ಎಂಬಾಕೆ ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here