ಭಾರತದಲ್ಲಿ ಮತ್ತೆ ಹೆಚ್ಚಳವಾದ ಕೋವಿಡ್-19 ಸೋಂಕು- ಡಿ.13ರಂದು ದೇಶದಲ್ಲಿ 252 ಪ್ರಕರಣಗಳು ದಾಖಲು

ಮಂಗಳೂರು(ನವದೆಹಲಿ): ಭಾರತದಲ್ಲಿ ಮತ್ತೆ ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದ್ದು, ಡಿ.13ರಂದು ಒಂದೇ ದಿನ ದೇಶಾದ್ಯಂತ 252 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ.

ಈ ವರ್ಷದ ಜೂನ್ 2 ರಿಂದೀಚೆಗೆ ಇದು ದಿನವೊಂದರಲ್ಲಿ ದಾಖಲಾದ ಗರಿಷ್ಟ ಪ್ರಮಾಣದ ಸೋಂಕು ಪ್ರಕರಣಗಳಾಗಿದೆ. ಇಂದಿನ ಪ್ರಕರಣಗಳ ಸಂಖ್ಯೆಯೂ ಸೇರಿದಂತೆ ದೇಶದಲ್ಲಿ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 1,091 ಕ್ಕೆ ಏರಿದೆ ಎಂದು ಡಿ.13ರಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸಿವೆ.

LEAVE A REPLY

Please enter your comment!
Please enter your name here