ಮಂಗಳೂರು(ನವದೆಹಲಿ): ಡಿ.13ರಂದು ನಡೆದ ಸಂಸತ್ ದಾಳಿ ಪ್ರಕರಣದ ಆರೋಪಿಗಳಿಗೆ ಪ್ರತಾಪ್ ಸಿಂಹ ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಂಬುದೆಲ್ಲವೂ ತನಿಖೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಾಲೋಚನೆ ಮಾಡಲಾಯಿತು ಎಂದು ಜೋಶಿ ಹೇಳಿದ್ದಾರೆ. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷತೆ ಮಾಡುವುದು ನಮ್ಮ ಉದ್ದೇಶ. 1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ. ತಪ್ಪಿತಸ್ಥರರಿಗೆ ಶಿಕ್ಷೆ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ. ದೇಶದ ಭದ್ರತೆಯ ವಿಚಾರದಲ್ಲಿ ಸ್ಪೀಕರ್ ಆದೇಶದಂತೆ ಕೆಲಸ ಮಾಡಲಿದೆ. ಪ್ರತಾಪ್ ಸಿಂಹ ಅವರು ಯಾವ ಹಿನ್ನೆಲೆಯಲ್ಲಿ ಪಾಸ್ ಕೊಟ್ಟರು ಎಲ್ಲವೂ ತನಿಖೆ ಆಗಲಿದೆ. ಯಾರನ್ನು ಯಾವ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.