ಮಾಜಿ ಪ್ರದಾನಿ ವಾಜಪೇಯಿ ಬಯೋಪಿಕ್‌ – ಡಿ.20ರಂದು ‘ಮೈ ಅಟಲ್​ ಹೂಂ’ ಚಿತ್ರದ ಟ್ರೇಲರ್ ಬಿಡುಗಡೆ

ಮಂಗಳೂರು (ಮುಂಬೈ ): ಭಾರತ ಕಂಡ ಮಹಾನ್‌ ರಾಜಕಾರಣಿ, ವಾಗ್ಮಿ, ಕವಿಹೃದಯದ ಮಾಜಿ ಪ್ರಧಾನಿ ದಿ.ಅಟಲ್‌ ಬಿಹಾರಿ ವಾಜಪೇಯಿ ಅವರ ಬಯೋಪಿಕ್‌ ‘ಮೈ ಅಟಲ್‌ ಹೂಂ’ ಚಿತ್ರದ ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ಈ ಬಗ್ಗೆ ನಟ ಪಂಕಜ್ ತ್ರಿಪಾಠಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ‘ಅಟಲ್ ಬಿಹಾರಿ ವಾಜಪೇಯಿ ಜಿ ಅವರನ್ನು ಸ್ವಾಗತಿಸಲು ಎಲ್ಲರೂ ಒಟ್ಟಾಗಿ ಬನ್ನಿ, ಡಿ.20ರಂದು ‘ಮೈ ಅಟಲ್‌ ಹೂಂʼ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. 2024ರ ಜ.19ರಂದು ಚಿತ್ರ ತೆರೆಕಾಣಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಅಟಲ್​ ಬಿಹಾರಿ ವಾಜಪೇಯಿ ಪಾತ್ರದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಪಂಕಜ್​​ ತ್ರಿಪಾಠಿ ನಟಿಸಿದ್ದಾರೆ. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ರವಿ ಜಾದವ್​ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಸಲೀಮ್ ಸುಲೈಮಾನ್​ ಸಂಗೀತ ನೀಡಿದ್ದಾರೆ.

LEAVE A REPLY

Please enter your comment!
Please enter your name here