“ಮೂಗಜ್ಜನ ಕೋಳಿ” ಅಭಿನಯಕ್ಕೆ ನವೀನ್ ಡಿ ಪಡೀಲ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ

ಮಂಗಳೂರು(ಹುಬ್ಬಳ್ಳಿ): ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರ ಅಕಾಡೆಮಿಯ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತುಳುನಾಡ ಕಲಾವಿದ ನವೀನ್ ಡಿ ಪಡೀಲ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಂತೋಷ್ ಮಾಡ ನಿರ್ದೇಶನದ ಮೊದಲ ಅರೆಭಾಷೆ ಚಿತ್ರ ಮೂಗಜ್ಜನ ಕೋಳಿ, ಚಿತ್ರದಲ್ಲಿ ಮೂಗಜ್ಜನ ಪಾತ್ರವನ್ನು ನವೀನ್ ಡಿ ಪಡೀಲ್ ನಿರ್ವಹಿಸಿದ್ದು, ಇಡೀ ಸಿನಿಮಾದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲದ, ಕೋಳಿಗಳನ್ನು ಪ್ರೀತಿಸುವ ಒರಟು ಮುದುಕನ ಪಾತ್ರದಲ್ಲಿ ಮನೋಜ್ಞವಾಗಿ ಅಭಿನಯಿಸಿದ್ದು, ಜ್ಯೂರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಮುಗ್ಧ ಮನಸ್ಸಿನ ಬಾಲಕಿ ಹಾಗೂ ಕೋಳಿಸಾಕುವ ಗೋವಿಂದ ಎಂಬ ಮೂಗಜ್ಜನ ಮಧ್ಯೆ ನಡೆಯುವ ಸಂಘರ್ಷ ಹಾಗೂ ಸಂಬಂಧದ ಕತೆಯೇ ಮೂಗಜ್ಜನ ಕೋಳಿ. ಮೂಗಜ್ಜನ ಕೋಳಿ ಚಿತ್ರವು 2024ರ ಮೊದಲಾರ್ಧದಲ್ಲಿ ತೆರೆಗೆ ಬರಲಿದೆ ಎಂದು ನಿರ್ಮಾಪಕ ಕೆ. ಸುರೇಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here