ವಿ.ವಿ ಕುಲಪತಿ ಛಾಯಾಚಿತ್ರ ಬಳಸಿ ನಕಲಿ ವಾಟ್ಸಾಪ್ ಖಾತೆ-ಪ್ರಾಧ್ಯಾಪಕರಿಗೆ ನಕಲಿ ಸಂದೇಶ ರವಾನೆ-ಸೈಬರ್ ಕ್ರೈಂಗೆ ದೂರು

ಮಂಗಳೂರು(ಕೊಣಾಜೆ): ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಯಾಗಿರುವ ಪ್ರೊ.ಜಯರಾಜ್ ಅಮೀನ್ ಅವರ ಛಾಯಾಚಿತ್ರವನ್ನು ಬಳಸಿ ವಾಟ್ಸಪ್ ಖಾತೆಯನ್ನು ಸೃಷ್ಠಿ ಮಾಡಿ ಹಲವು ಸಂದೇಶಗಳು ಪ್ರಾಧ್ಯಾಪಕರಿಗೆ ಹಾಗೂ ಇತರರಿಗೆ ರವಾನೆಯಾಗಿದ್ದು, ಈ ಕುರಿತು ಕುಲಪತಿಯವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ಮಧ್ಯಾಹ್ನದಿಂದ ಇಂತಹ ಸಂದೇಶಗಳು ಈ ನಕಲಿ ಖಾತೆಯಿಂದ ರವಾನೆಯಾಗಿದ್ದು, ಈ ಬಗ್ಗೆ ಹಲವು ಪ್ರಾಧ್ಯಾಪಕರು ಕುಲಪತಿಯವರ ಗಮನಕ್ಕೆ ತಂದಿದ್ದರು. ಕೂಡಲೇ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನುಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here