ಹೊಸ ವರ್ಷಕ್ಕೆ ಹೊಸ ಸಾಧನೆ-ಕಪ್ಪು ರಂಧ್ರಗಳ ಅಧ್ಯಯನಕ್ಕೆ ಇಸ್ರೋದಿಂದ ಎಕ್ಸ್‌ಪೋಸ್ಯಾಟ್ ಉಡಾವಣೆ

ಮಂಗಳೂರು(ಹೊಸದಿಲ್ಲಿ): ಹೊಸ ವರ್ಷದ ಮೊದಲ ದಿನ ಭಾರತವು ಜಗತ್ತಿನ ಅತ್ಯಂತ ಹಳೆಯ ನಿಗೂಢತೆಗಳಲ್ಲೊಂದಾದ ಕಪ್ಪು ರಂಧ್ರಗಳ ಬಗ್ಗೆ ಅನ್ವೇಷಿಸುವ ಉದ್ದಿಷ್ಟ ಕಾರ್ಯವನ್ನು ಆರಂಭಿಸಿದೆ. ತನ್ನ ಎಕ್ಸ್‌ಪೋಸ್ಯಾಟ್ ಅಥವಾ ಎಕ್ಸ್‌-ರೇ ಪೊಲಾರಿಮೀಟರ್‌ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಜ.1ರಂದು ಇಸ್ರೋ ಉಡಾಯಿಸುವ ಮೂಲಕ ಹೊಸದೊಂದು ಪ್ರಯತ್ನಕ್ಕೆ ನಾಂದಿ ಹಾಡಿದೆ.

ಇಂದು ಬೆಳಿಗ್ಗೆ 9.32ಕ್ಕೆ ಸರಿಯಾಗಿ ಈ ಪೊಲಾರ್ ಸ್ಯಾಟಿಲೈಟ್‌ ಲಾಂಚ್‌ ವೆಹಿಕಲ್‌ ಉಡಾವಣೆ ಯಶಸ್ವಿಯಾಗಿದೆ. “ಪಿಎಸ್‌ಎಲ್‌ವಿ-ಸಿ58 ಯನ್ನು ನಿಗದಿತ ಕಕ್ಷೆಯಾದ 6 ಡಿಗ್ರೀ ಇಂಕ್ಲಿನೇಷನ್‌ನೊಂದಿಗಿನ 650 ಕಿಮೀ ಕಕ್ಷೆಯಲ್ಲಿ ಇರಿಸಲಾಗಿದೆ,” ಎಂದು ಇಸ್ರೋ ತನ್ನ ಪೋಸ್ಟ್‌ ನಲ್ಲಿ ತಿಳಿಸಿದೆ. ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಈ ಯಶಸ್ವಿ ಉಡಾವಣೆ ಕುರಿತು ಘೋಷಿಸಿದ್ದಾರೆ. ಇದು ಪೊಲಾರ್‌ ಉಪಗ್ರಹ ಉಡಾವಣೆ ವಾಹನದ 60ನೇ ಯಾನವಾಗಿದೆ. ಈ 260 ಟನ್‌ ರಾಕೆಟ್‌ ಅತ್ಯಾಧುನಿಕ ಖಗೋಳ ಅಬ್ಸರ್ವೇಟರಿಯನ್ನು ಹೊಂದಿದ್ದು ಅದು ಕಪ್ಪು ರಂಧ್ರಗಳು ಮತ್ತು ನ್ಯೂಟ್ರಾನ್‌ ನಕ್ಷತ್ರಗಳ ಅಧ್ಯಯನ ನಡೆಸಲಿದೆ. ಅಮೆರಿಕಾದ ನಂತರ ಕಪ್ಪು ರಂಧ್ರಗಳ ಅಧ್ಯಯನಕ್ಕೆ ಅಬ್ಸರ್ವೇಟರಿ ಹೊಂದಿದ ಜಗತ್ತಿನ ಎರಡನೇ ರಾಷ್ಟ್ರ ಭಾರತವಾಗಲಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

LEAVE A REPLY

Please enter your comment!
Please enter your name here