ಮಂಗಳೂರು: ಜಪಾನ್ ನ ಪಶ್ಚಿಮ ಭಾಗದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ. ನೋಟೋ ಕರಾವಳಿಯಲ್ಲಿ ಐದು ಮೀಟರ್ ಎತ್ತರದ ಅಲೆಗಳೊಂದಿಗೆ ಸುನಾಮಿ ಅಪ್ಪಳಿಸಬಹುದೆಂದು ಜಪಾನ್ ಹವಾಮಾನ ಇಲಾಖೆ ಹೇಳಿದೆ.
ನೋಟೋ ಪ್ರದೇಶದಲ್ಲಿ ಹಲವಾರು ಭೂಕಂಪನಗಳು ಸಂಭವಿಸಿದ್ದು, ಸ್ಥಳೀಯ ಕಾಲಮಾನ ಸಂಜೆ 4.06ಗೆ ಮೊದಲ ಬಾರಿ 5.7 ತೀವೃತೆಯ ಭೂಕಂಪನ ದಾಖಲಾಗಿತ್ತು. ಇದರ ಬೆನ್ನಲ್ಲೇ 7.6, 6.1, 4.5, 4.6 ಮತ್ತು 4.8 ತೀವ್ರತೆಯ ಭೂಕಂಪನಗಳು ದಾಖಲಾಗಿವೆ. ಜಪಾನ್ ಹವಾಮಾನ ಏಜನ್ಸಿ ನೀಡಿದ ಮಾಹಿತಿಯಂತೆ ಭೂಕಂಪವು ಇಶಿಕಾವ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸಿದ್ದು, ಇಶಿಕಾವ, ನಿಗಾಟ ಮತ್ತು ತೊಯಮಾ ಕರಾವಳಿಗಳಲ್ಲಿ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿದೆ. ರಾಜಧಾನಿ ಟೋಕಿಯೋ ಮತ್ತು ಕ್ಯಾಂಟೊ ಪ್ರದೇಶಗಳಲ್ಲೂ ಕಂಪನಗಳ ಅನುಭವವಾಗಿದೆ. ಕರಾವಳಿ ಪ್ರದೇಶಗಳಿಂದ ದೂರ ಹೋಗುವಂತೆ ಹಾಗೂ ಕಟ್ಟಡಗಳ ಮೇಲಂತಸ್ತುಗಳಿಗೆ ಅಥವಾ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಜನರಿಗೆ ಸೂಚಿಸಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Imagine waking up on 1st day of 2024 after a mad party last night, Wishing everyone Happy New Year, driving off to meet friends & family just to see Tsunami waves in waterways after an earthquake of 7.6 magnitude in Western japan! ?#earthquake #tsunamipic.twitter.com/cChvxQlOMw
— Vishal Verma (@VishalVerma_9) January 1, 2024
A #tsunami warning was issued after the #earthquake in #Japan. And warnings are being made that the western coastal areas should be evacuated and everyone should move to higher ground.pic.twitter.com/wKHT6eZwbs
— Einstein Echoes (@EinsteinEchoes) January 1, 2024