ಪ್ರೊಬೇಷನ್ ನಿರಾಕರಿಸಿದ ನ್ಯಾಯಾಧೀಶೆಯ ಮೇಲೆ ಹಲ್ಲೆ- ವಿಡಿಯೋ ವೈರಲ್

ಮಂಗಳೂರು (ಲಾಸ್‌ವೆಗಾಸ್): ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಕಲಾಪದ ವೇಳೆ ಪ್ರೊಬೇಷನ್ ನಿರಾಕರಿಸಲ್ಪಟ್ಟ ವ್ಯಕ್ತಿಯೋರ್ವ ನ್ಯಾಯಾಧೀಶೆಯ ಮೇಲೆ ಹಲ್ಲೆ ನಡೆಸಿದ ಘಟನೆ ಲಾಸ್‌ವೆಗಾಸ್‌ನ ನೆವಾಡಾದಲ್ಲಿ ನಡೆದಿದ್ದು, ಘಟನೆಯ ದೃಶ್ಯವು ವೀಡಿಯೊದಲ್ಲಿ ಸೆರೆಯಾಗಿದೆ.

ಹಲ್ಲೆ ಪ್ರಕರಣವೊಂದರ ಆರೋಪಿ ಡೆವೊಬ್ರಾ ರೆಡನ್ (30) ಎಂಬಾತ ತಪ್ಪು ಒಪ್ಪಿಕೊಂಡಿದ್ದು,‌ ಜ.3ರಂದು ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾ.ಮೇರಿ ಕೇ ಹೋಲ್ತಸ್ ಅವರು ಶಿಕ್ಷೆಯ ಪ್ರಮಾಣ ಕುರಿತು ವಾದವಿವಾದಗಳನ್ನು ಆಲಿಸುತ್ತಿದ್ದರು. ಈ ವೇಳೆ ರೆಡನ್ ಪರ ವಕೀಲರು ತನ್ನ ಕಕ್ಷಿದಾರನಿಗೆ ಪ್ರೊಬೇಷನ್ ವಿಧಿಸುವಂತೆ ಕೋರಿದ್ದರು. ನಿರ್ದಿಷ್ಟ ಅವಧಿಗೆ ಸನ್ನಡತೆಯ ಷರತ್ತಿನಲ್ಲಿ ನ್ಯಾಯಾಲಯದ ನಿಗಾದಲ್ಲಿ ಬಂಧಮುಕ್ತನಾಗಿ ಇರಿಸುವುದಕ್ಕೆ ಪ್ರೊಬೇಷನ್ ಎನ್ನಲಾಗುತ್ತದೆ. ಆದರೆ ಅವರ ಕೋರಿಕೆಯನ್ನು ನಿರಾಕರಿಸಿದ್ದ ನ್ಯಾ.ಹೋಲ್ತಸ್ ಹಳೆಯ ಅಪರಾಧಿಯಾಗಿರುವ ಆರೋಪಿಗೆ ಜೈಲು ಶಿಕ್ಷೆಯನ್ನು ವಿಧಿಸುವುದಾಗಿ ಹೇಳಿದ್ದರು. ಇದರಿಂದ ಕ್ರುದ್ಧಗೊಂಡ ರೆಡನ್ ನ್ಯಾಯಾಲಯದ ಬೆಂಚಿನ ಮೇಲೆ ಬಾಗಿ ನ್ಯಾ.ಹೋಲ್ತಸ್ ಅವರ ಮೇಲೆ ಹಲ್ಲೆ ನಡೆಸಿದ್ದು, ಹಿಂಬದಿಯಲ್ಲಿ ಅಳವಡಿಸಿದ್ದ ಧ್ವಜಗಳು ಕೆಳಕ್ಕೆ ಬಿದ್ದಿದ್ದವು. ತಕ್ಷಣ ಅಲ್ಲಿದ್ದ ಮೂವರು ರೆಡನ್‌ನನ್ನು ಹಿಡಿದು ಥಳಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಹಲ್ಲೆಯಿಂದಾಗಿ ಆಸನದಿಂದ ಕೆಳಕ್ಕೆ ಬಿದ್ದ 62ರ ಹರೆಯದ ನ್ಯಾ.ಹೋಲ್ತಸ್ ಜೊತೆಗೆ ನ್ಯಾಯಾಲಯದ ಮಾರ್ಷಲ್ ಕೂಡ ಗಾಯಗೊಂಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here