ಮಂಗಳೂರು /ಪುತ್ತೂರು: ಏರ್ ಟೆಲ್ ನೆಟ್ವರ್ಕ್ ನಲ್ಲಿ ತಾಂತ್ರಿಕ ಸಮಸ್ಯೆ ತಲೆದೂರಿದ್ದು ಏರ್ ಟೆಲ್ ಸಿಮ್ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಏರ್ಟೆಲ್ ಸಿಮ್ ಬಳಕೆದಾರರಿಗೆ ಕಳೆದ 2 ಗಂಟೆಯಿಂದ ಸಮಸ್ಯೆ ಎದುರಾಗಿದ್ದು, ಕರೆಗಳನ್ನು ಮಾಡುವುದಾಗಲಿ, ಸ್ವೀಕರಿಸುವುದಾಗಲಿ ಸಾಧ್ಯವಾಗುತ್ತಿಲ್ಲ. ಸಂಪರ್ಕ ಸಾಧಿಸಿದರೂ ಕ್ಷಣ ಮಾತ್ರದಲ್ಲಿ ಸಂಪರ್ಕ ಕಡಿದುಕೊಂಡ ಬಳಕೆದಾರ ಸಮಸ್ಯೆಯನ್ನು ಎದುರಿಸುತ್ತಿದ್ದು ಅನಿವಾರ್ಯವಾಗಿ ವಾಟ್ಸಾಪ್ ಕರೆಗಳಿಗೆ ಮೊರೆ ಹೋಗುತ್ತಿದ್ದಾರೆ.