ಮಂಗಳೂರು(ಬೆಳ್ತಂಗಡಿ): ಭಾರತೀಯ ಜನತಾ ಪಾರ್ಟಿ ರಾಜ್ಯದ ವಿವಿಧ ಮೋರ್ಚಾಗಳಿಗೆ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿದೆ. ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಮೋರ್ಚಾಗಳ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ:
- ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ(ಉಡುಪಿ ಜಿಲ್ಲೆ), ಡಾ.ಶೋಭಾ ಸಂಗನಗೌಡ(ಹಾವೇರಿ)
- ಯುವ ಮೋರ್ಚಾ : ಹರೀಶ್ ಪೂಂಜಾ(ದಕ್ಷಿಣ ಕನ್ನಡ), ಸಂದೀಪ್ ರವಿ(ಬೆಂಗಳೂರು ದಕ್ಷಿಣ)
- ಎಸ್ಟಿ ಮೋರ್ಚಾ : ಕೃಷ್ಣಾ ನಾಯಕ್(ಮೈಸೂರು), ಬಸವರಾಜ ಹುಂದ್ರಿ(ಚಿಕ್ಕೋಡಿ)
- ಎಸ್ಸಿ ಮೋರ್ಚಾ : ಉಮೇಶ್ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ(ಹುಬ್ಬಳ್ಳಿ-ಧಾರವಾಡ)
- ಹಿಂದುಳಿದ ವರ್ಗಗಳ ಮೋರ್ಚಾ :ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್(ಬೆಂಗಳೂರು ದಕ್ಷಿಣ)
- ರೈತ ಮೋರ್ಚಾ : ಬಿ.ಸಿ.ನವೀನ್ ಕುಮಾರ್(ಕೊಡಗು), ಕಲ್ಮರುಡಪ್ಪ(ಚಿಕ್ಕಮಗಳೂರು)
- ಅಲ್ಪಸಂಖ್ಯಾತ ಮೋರ್ಚಾ: ಇಂದ್ರ ಕುಮಾರ್( ಬೆಂಗಳೂರು ದಕ್ಷಿಣ), ರೌಫುದ್ದೀನ್ ಕಛೇರಿವಾಲೆ ( ಬೀದರ್)