ಅಯೋಧ್ಯಾ ರೈಲ್ವೆ ನಿಲ್ದಾಣವನ್ನು ಲೈಟಿಂಗ್ ಮೂಲಕ ಅಲಂಕರಿಸಿದ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಸಂಸ್ಥೆ

ಮಂಗಳೂರು: ಸ್ಪೆಷಲೈಸ್ಡ್ ಲೈಟಿಂಗ್ ನಲ್ಲಿ ಹೆಸರುವಾಸಿಯಾದ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಉತ್ತರ ಪ್ರದೇಶದ ಅಯೋದ್ಯೆಯ ರೈಲ್ವೆ ನಿಲ್ದಾಣದಲ್ಲಿ ಸುಮಾರು 300 ಕ್ಕೂ ಅಧಿಕ RGBW ಕಲರ್ ಲೈಟ್ ಗಳನ್ನು ತಯಾರಿಸಿ ಅಳವಡಿಸುವ ಮೂಲಕ ಲಕ್ಷಾನುಲಕ್ಷ ಬಣ್ಣಗಳನ್ನು ದಿನಕ್ಕೊಂದರಂತೆ ಪ್ರದರ್ಶಿಸಿ ಪ್ರವಾಸಿಗರನ್ನು ಕಣ್ಮನಸೆಳೆಯಲು ಸಿದ್ಧವಾಗಿದೆ.

ಜಪಾನೀಸ್ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾರಂಭವಾದ ಈ ಉದ್ಯಮ ಪ್ರಸ್ತುತ 250 ಕ್ಕೂ ಅಧಿಕ ಉತ್ಸಾಹಿ ಸ್ಥಳೀಯ ಪ್ರತಿಭೆಗಳಿಂದ ಬೆಳಗುತ್ತಿದೆ. ಭಾರತೀಯ ಲೈಟಿಂಗ್ ಉತ್ಪಾದನ ಸಂಸ್ಥೆಯಾದ ಲೆಕ್ಸಾ ಲೈಟಿಂಗ್ ಮೇಕ್ ಇನ್ ಇಂಡಿಯಾ ತತ್ವವನ್ನು ಸಾಕಾರಗೊಳಿಸುತ್ತಿದೆ. ಸಂಶೋಧನೆ ಮತ್ತು ಅಭಿವೃದ್ಧಿ, ಪರಿಕಲ್ಪನೆ, ಕಚ್ಚಾ ವಸ್ತುಗಳನ್ನು ಪಡೆಯುವುದು, ಯೋಜನೆ, ವಿನ್ಯಾಸ, ಉತ್ಪಾದನೆ ಮತ್ತು ವಿತರಣೆ ಎಂಬ ಪರಿಕಲ್ಪನೆಯ ಆಧಾರದಲ್ಲಿ 500 ಕ್ಕೂ ಅಧಿಕ ವಿಶೇಷ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸಿ ಭಾರತದ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ.

ಲೆಕ್ಸಾ ಸಂಸ್ಥೆಯ ಗರಿಮೆಗೆ ಸಾರಥಿಯಾದ ರೊನಾಲ್ಡ್ ಸಿಲ್ವನ್ ಡಿಸೋಜ ಅವರಿಗೆ ಆತ್ಮನಿರ್ಭರ ಭಾರತ ಅವಾರ್ಡ್, ಹೈ ಪ್ಲೈಯರ್ಸ್ ಗ್ಲೋಬಲ್ ಇಂಡಿಯನ್ಸ್ ಅವಾರ್ಡ್, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ವ ಪ್ರಶಸ್ತಿ ಹಾಗೂ ಇನ್ನೂ ಅನೇಕ ಗೌರವಗಳು ದೊರಕಿದೆ. ಕೆಲವೇ ದಿನಗಳ ಹಿಂದೆ ಲೆಕ್ಸಾ ಸಂಸ್ಥೆಯೂ ಕರ್ನಾಟಕದ ಸುವರ್ಣ ವಿಧಾನ ಸೌದ ವನ್ನು ಲೈಟಿಂಗ್ ಮೂಲಕ ಅಲಂಕರಿಸಿ ಹೆಸರುವಾಸಿಯಾಗಿದೆ ಹಾಗೂ ದೇಶ ವಿದೇಶಗಳಲ್ಲಿ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿದೆ ಮತ್ತು ಈ ಎಲ್ಲಾ ಸಾಧನೆಗಳ ಪಟ್ಟಿಗೆ ಹೆಚ್ಚುವರಿಯಾಗಿ ಅಯೋಧ್ಯೆಯ ಶ್ರೀ ರಾಮಮಂದಿರವನ್ನು ತಲುಪಲು ಪ್ರಮುಖ ಸಾರಿಗೆ ವಿಧಾನವಾದ ಅಯೋಧ್ಯಾ ರೈಲ್ವೆ ನಿಲ್ದಾಣವನ್ನು ಲೈಟಿಂಗ್ ಮೂಲಕ ಅಲಂಕೃತ ಗೊಳಿಸಿ ಇನ್ನೊಂದು ಮೈಲಿಗಲ್ಲನ್ನು ತನ್ನದಾಗಿಸಿಕೊಂಡಿದೆ.

 

LEAVE A REPLY

Please enter your comment!
Please enter your name here