
ಮಂಗಳೂರು(ಬೆಂಗಳೂರು): ಜ.19 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜ.19ರಂದು ಮಧ್ಯಾಹ್ನ 1:05 ಕ್ಕೆ ವಿಶೇಷ ವಿಮಾನದ ಮೂಲಕ ಕಲಬುರಗಿಯಿಂದ ಬೆಂಗಳೂರಿಗೆ ಹೊರಟು, 2:10 ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. 2:15 ಕ್ಕೆ ರಸ್ತೆ ಮಾರ್ಗವಾಗಿ ದೇವನಹಳ್ಳಿ ತಾಲೂಕಿನ ಭಟ್ಟರ ಮಾರನಹಳ್ಳಿಗೆ ಪ್ರಯಾಣ ಮಾಡಲಿದ್ದು, 2:45ಕ್ಕೆ ಭಟ್ಟರಮಾರನಹಳ್ಳಿ ತಲುಪಲಿದ್ದಾರೆ. ಭಟ್ಟರಮಾರನಹಳ್ಳಿಯಲ್ಲಿ ಬಿಐಇಟಿಸಿ ಲೋಕಾರ್ಪಣೆ ಮತ್ತು ಬೋಯಿಂಗ್ ಸುಕನ್ಯಾ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 3:45 ಕ್ಕೆ ಭಟ್ಟರ ಮಾರನಹಳ್ಳಿಯಿಂದ ನಿರ್ಗಮಿಸುವ ಪ್ರಧಾನಿ, 3:55 ಕ್ಕೆ ಕೆಐಎಎಲ್‌ಗೆ ತಲುಪಿ, ಸಂಜೆ 4 ಗಂಟೆಗೆ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.