ಮಂಗಳೂರು(ನವದೆಹಲಿ): ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚುವುದಾಗಿ ಘೋಷಿಸಿದ್ದಾರೆ.
ಅತಿಯಾದ ಸಾರ್ವಜನಿಕ ಭಾವನೆಗಳಿಂದ ಪ್ರೇರಿತವಾದ ಈ ನಿರ್ಧಾರವು ಮಹತ್ವದ ಘಟನೆಯಲ್ಲಿ ಭಾಗವಹಿಸಲು ಅಥವಾ ವೀಕ್ಷಿಸಲು ಅಧಿಕಾರಿಗಳಿಗೆ ಅವಕಾಶ ನೀಡುವ ಗುರಿಯನ್ನು ಹೊಂದಿದೆ. ರಾಮಲಲ್ಲಾ ವಿಗ್ರಹವನ್ನು ಜ.17ರಂದು ರಾತ್ರಿ ರಾಮ ದೇವಾಲಯದ ಗರ್ಭಗುಡಿಗೆ ತರಲಾಯಿತು ಎಂದು ಶ್ರೀ ರಾಮ್ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಖಚಿತಪಡಿಸಿದ್ದಾರೆ. ಸಧ್ಯ ವಿಗ್ರಹವನ್ನ ಗರ್ಭಗೃಹದಲ್ಲಿ ಇರಿಸಲಾಗಿದ್ದು, ಔಪಚಾರಿಕ ಸಿದ್ಧತೆಗಳ ಭಾಗವಾಗಿ ಜ.17ರಂದು ಕಲಶ ಪೂಜೆ ನಡೆಸಲಾಯಿತು.