ಮಂಗಳೂರು(ನವದೆಹಲಿ): ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ವಿಶ್ವದ ಅತ್ಯಂತ ವಿಶ್ವಾಸಾರ್ಹ ಸರಕಾರಗಳಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 28 ದೇಶಗಳ ಸರಕಾರಗಳ ಸ್ಥಿತಿಗತಿಗಳನ್ನು ಅವಲೋಕಿಸಲಾಗಿದೆ. ಯಾವ ದೇಶದ ಜನ ತಮ್ಮ ಸರಕಾರವನ್ನು ಹೆಚ್ಚು ನಂಬುತ್ತಾರೆ ಎಂಬುದನ್ನು ಸಮೀಕ್ಷೆ ಮಾಡಲಾಗಿದೆ. ಮತ್ತು ಯಾವ ದೇಶದಲ್ಲಿ ಜನ ಕಡಿಮೆ ನಂಬುತ್ತಾರೆ ಎಂಬುದನ್ನೂ ಇದರಲ್ಲಿ ತಿಳಿಸಲಾಗಿದೆ. ಈ ಸಮೀಕ್ಷಾ ವರದಿಯಲ್ಲಿ ಸೌದಿ ಅರೇಬಿಯಾ ಹೆಚ್ಚು ವಿಶ್ವಾಸಾರ್ಹ ಸರಕಾರಗಳಲ್ಲಿ ಅಗ್ರ ಶ್ರೇಯಾಂಕದಲ್ಲಿದೆ. ಚೀನಾ ಎರಡನೇ ಸ್ಥಾನದಲ್ಲಿದ್ದರೆ ಮೂರನೇ ಸ್ಥಾನದಲ್ಲಿ ಭಾರತ ಸರಕಾರ ಇದೆ.