ಮಂಗಳೂರು(ಚೆನ್ನೈ): ರಾಷ್ಟ್ರಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಭವತಾರಿಣಿ (47) ಅನಾರೋಗ್ಯದಿಂದ ಶ್ರೀಲಂಕಾದಲ್ಲಿ ಜ.25ರಂದು ನಿಧನರಾಗಿದ್ದಾರೆ. ಭವತಾರಿಣಿ, ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ.
ಭವತಾರಿಣಿ ಪತಿ, ಸಹೋದರರಾದ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಮತ್ತು ಕಾರ್ತಿಕ್ ರಾಜಾ ಅವರನ್ನು ಅಗಲಿದ್ದಾರೆ. ಭವತಾರಿಣಿ ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಹಲವು ಗೀತೆಗಳನ್ನು ಹಾಡಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿದ್ದ ಭವತಾರಿಣಿ, ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು. ‘ತಮಿಳು ರಾಷ್ಟ್ರಕವಿ ಸುಬ್ರಹ್ಮಣ್ಯ ಭಾರತಿ ಅವರ ಜೀವನ ಆಧರಿಸಿದ ‘ಭಾರತಿ‘ ಚಿತ್ರದಲ್ಲಿನ ಗಾಯನಕ್ಕಾಗಿ ಭವತಾರಿಣಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅವರ ಸಾವು ತುಂಬಲಾರದ ನಷ್ಟವಾಗಿದೆ‘ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.
The voice that forever lives in the heart of people for its innocence and love! You were a pure soul! Gone too soon! I pray to God to give strength to the family of Illayaraja sir and my brother @thisisysr at this moment! Rest in peace Bhavatharini. ?#Bhavatharini #RIP pic.twitter.com/PO3ArYGq49
— Silambarasan TR (@SilambarasanTR_) January 25, 2024