ರಾಜ್ಯದ ಮದರಸಾಗಳಲ್ಲಿ ʼಶ್ರೀರಾಮ’ ನ ಪಾಠ ಭೋದನೆ – ಉತ್ತರಾಖಂಡ್ ವಕ್ಫ್ ಮಂಡಳಿ ಘೋಷಣೆ

ಮಂಗಳೂರು: ಉತ್ತರಾಖಂಡ್ ವಕ್ಫ್ ಮಂಡಳಿಯ ಅಧೀನದಲ್ಲಿರುವ ಮದರಸಾಗಳಲ್ಲಿನ ಪಠ್ಯಕ್ರಮದಲ್ಲಿ ಶ್ರೀರಾಮನ ಕಥೆಯನ್ನು ಸೇರಿಸಲಾಗುವುದು. ಮದರಸದ ವಿದ್ಯಾರ್ಥಿಗಳಿಗೆ ಪ್ರವಾದಿ ಮುಹಮ್ಮದ್ ಅವರೊಂದಿಗೆ ಶ್ರೀರಾಮನ ಜೀವನವನ್ನೂ ಕಲಿಸಲಾಗುವುದು. ಮುಂದಿನ ಮಾರ್ಚ್ ನಿಂದ ಪ್ರಾರಂಭವಾಗುವ ಶೈಕ್ಷಣಿಕ ವರ್ಷದಲ್ಲಿ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಮ್ಸ್ ಹೇಳಿದ್ದಾರೆ.

2024ರ ಮಾರ್ಚ್‌ನಿಂದ ಹೊಸ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶ್ರೀರಾಮನ ಬಗ್ಗೆಯೂ ಓದುತ್ತಾರೆ. ಶ್ರೀರಾಮನ ಆದರ್ಶ ಜೀವನವನ್ನು ಎಲ್ಲರೂ ತಿಳಿದುಕೊಂಡು ಅನುಕರಿಸಬೇಕು. ತಂದೆಯ ವಾಗ್ದಾನವನ್ನು ಪೂರೈಸಲು ಶ್ರೀರಾಮನು ಸಿಂಹಾಸನವನ್ನು ತೊರೆದು ಕಾಡಿಗೆ ಹೋದನು. ಶ್ರೀರಾಮನಂತಹ ಮಗನನ್ನು ಯಾರು ಬಯಸುವುದಿಲ್ಲ ಹೇಳಿ? ಎಂದು ಶಾದಾಬ್ ಶಮ್ಸ್ ಹೇಳಿದ್ದಾರೆ. ವಕ್ಫ್ ಮಂಡಳಿ ಅಧೀನದಲ್ಲಿ ರಾಜ್ಯಾದ್ಯಂತ 117 ಮದರಸಾಗಳನ್ನು ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here