ಮಂಗಳೂರು(ನವದೆಹಲಿ): ಮುಂಬರುವ ಲೋಕಸಭಾ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳನ್ನು ನೇಮಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ರಾಜ್ಯದ ಚುನಾವಣಾ ಉಸ್ತುವಾರಿಯಾಗಿ ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ನಿಯುಕ್ತಿಗೊಳಿಸಿ ಅದೇಶ ಹೊರಡಿಸಿದೆ. ಇದರೊಂದಿಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೂ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನೇಮಕಗೊಂಡ ಉಸ್ತುವಾರಿಗಳ ಪಟ್ಟಿ ಇಂತಿದೆ.
ದಕ್ಷಿಣ ಕನ್ನಡ-ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು ಗ್ರಾಮಾಂತರ- ನಿರ್ಮಲ್ ಕುಮಾರ್ ಸುರನ
ಬೆಂಗಳೂರು ದಕ್ಷಿಣ- ಎಂ ಕೃಷ್ಣಪ್ಪ
ಬೆಂಗಳೂರು ಸೆಂಟ್ರಲ್- ಗುರುರಾಜ್ ಗಂಟಿಹೊಳೆ
ಬೆಂಗಳೂರು ಉತ್ತರ- ಎಸ್ಆರ್ ವಿಶ್ವನಾಥ್
ಮೈಸೂರು- ಡಾ. ಸಿ.ಎನ್. ಅಶ್ವತ್ಥ ನಾರಾಯಣ್
ಮಂಡ್ಯ- ಸುನಿಲ್ ಸುಬ್ರಮಣಿ
ಚಾಮರಾಜನಗರ- ಎನ್ ವಿ ಪಣೀಶ್
ಹಾಸನ- ಎಂ ಕೆ ಪ್ರಾಣೇಶ್
ಉಡುಪಿ-ಚಿಕ್ಕಮಗಳೂರು- ಅರಗ ಜ್ಞಾನೇಂದ್ರ
ಶಿವಮೊಗ್ಗ- ರಘುಪತಿ ಭಟ್
ಉತ್ತರ ಕನ್ನಡ- ಹರತಾಳು ಹಾಲಪ್ಪ
ಧಾರವಾಡ- ಈರಣ್ಣ ಕಡಾಡಿ
ಹಾವೇರಿ- ಅರವಿಂದ್ ಬೆಲ್ಲದ್
ಬೆಳಗಾವಿ- ವೀರಣ್ಣ ಚರಂತಿಮಠ
ಚಿಕ್ಕೋಡಿ- ಅಭಯ್ ಪಾಟೀಲ್
ಬಾಗಲಕೋಟೆ- ಲಿಂಗರಾಜ್ ಪಾಟೀಲ್
ವಿಜಯಪುರ (ಎಸ್ಸಿ)- ರಾಜಶೇಖರ್ ಶೀಲವಂತ್
ಬೀದರ್- ಅಮರನಾಥ್ ಪಾಟೀಲ್
ಗುಲ್ಬರ್ಗಾ- ರಾಜು ಗೌಡ
ರಾಯಚೂರು (ಎಸ್ಟಿ)- ದೊಡ್ಡನಗೌಡ ಹೆಚ್ ಪಾಟೀಲ್
ಕೊಪ್ಪಳ- ರಘುನಾಥ್ ರಾವ್ ಮಲ್ಕಾಪುರೆ
ಬಳ್ಳಾರಿ (ಎಸ್ಟಿ)- ಎನ್ ರವಿಕುಮಾರ್
ದಾವಣಗೆರೆ- ಬೈರತಿ ಬಸವರಾಜ್
ಚಿತ್ರದುರ್ಗ (ಎಸ್ಸಿ)- ಚನ್ನಬಸಪ್ಪ
ತುಮಕೂರು- ಕೆ ಗೋಪಾಲಯ್ಯ
ಚಿಕ್ಕಬಳ್ಳಾಪುರ- ಕಟ್ಟಾ ಸುಬ್ರಮಣ್ಯ ನಾಯ್ಡು
ಕೋಲಾರ (ಎಸ್ಸಿ)- ಬಿ.ಸುರೇಶ್ ಗೌಡ
ಹೊಸದಾಗಿ ನೇಮಕಗೊಂಡಿರುವ ಪ್ರಭಾರಿಗಳಲ್ಲಿ ಒಬ್ಬ ರಾಜ್ಯಸಭಾ ಸದಸ್ಯ, 12 ಶಾಸಕರು, ನಾಲ್ಕು ಎಂಎಲ್‌ಸಿಗಳು, ಇಬ್ಬರು ಮಾಜಿ ಎಂಎಲ್‌ಸಿಗಳು ಮತ್ತು ಆರು ಮಾಜಿ ಶಾಸಕರು ಸೇರಿದ್ದಾರೆ. 1 ಶಾಸಕ, ಒಂದು ಎಂಎಲ್‌ಸಿ, ಮೂರು ಮಾಜಿ ಶಾಸಕರು ಮತ್ತು ಮೂರು ಮಾಜಿ ಎಂಎಲ್‌ಸಿಗಳನ್ನು ಸಂಚಾಲಕರನ್ನಾಗಿ ಹೆಸರಿಸಲಾಗಿದೆ.