ಆಸ್ಟ್ರೇಲಿಯ ಓಪನ್ ಗೆದ್ದ ರೋಹನ್ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಜೋಡಿ

ಮಂಗಳೂರು(ಮೆಲ್ಬರ್ನ್): ಆಸ್ಟ್ರೇಲಿಯ ಓಪನ್ ಟೂರ್ನಮೆಂಟ್ ನಲ್ಲಿ ಪುರುಷರ ಡಬಲ್ಸ್‌ ಪಂದ್ಯದಲ್ಲಿ ರೋಹನ್ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಜೋಡಿಯು, ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಅವರನ್ನು 7-6(0), 7-5 ಸೆಟ್ ಗಳಿಂದ ಸೋಲಿಸುವ ಮೂಲಕ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

2017 ರ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ಬೋಪಣ್ಣ ಅವರಿಗೆ ಇದು ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದೆ. ನಿನ್ನೆಯಷ್ಟೇ ಕೇಂದ್ರ ಸರಕಾರ ರೋಹನ್‌ ಬೋಪಣ್ಣ ಅವರಿಗೆ ಪದ್ಮಪ್ರಶಸ್ತಿ ಘೋಷಿಸಿತ್ತು.

LEAVE A REPLY

Please enter your comment!
Please enter your name here