ಫೆ. 27- 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳ ದ್ವೈವಾರ್ಷಿಕ ಚುನಾವಣೆ-ಅಧಿಸೂಚನೆ ಪ್ರಕಟಿಸಿದ ಭಾರತೀಯ ಚುನಾವಣಾ ಆಯೋಗ

ಮಂಗಳೂರು(ನವದೆಹಲಿ): 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರುವರಿ ‌27 ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದ್ದು, ಅಧಿಸೂಚನೆ ಪ್ರಕಟಿಸಿದೆ.

ಕರ್ನಾಟಕದ 4 ಸ್ಥಾನಗಳು ಸೇರಿದಂತೆ 56 ಸ್ಥಾನಗಳ ಸದಸ್ಯರ ಅವಧಿ ಮುಂದಿನ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಫೆಬ್ರುವರಿ 15 ಕೊನೆಯ ದಿನಾಂಕವಾಗಿದ್ದು, ಫೆಬ್ರುವರಿ 16ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಫೆಬ್ರುವರಿ 20 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನಾಂಕವಾಗಿದೆ. ಫೆ.27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಆಂಧ್ರ ಪ್ರದೇಶದ- 3, ಬಿಹಾರ– 6, ಛತ್ತೀಸಗಢ– 1,ಗುಜರಾತ್–4, ಹರಿಯಾಣ– 1, ಹಿಮಾಚಲ ಪ್ರದೇಶ– 1, ಕರ್ನಾಟಕ– 4, ಮಧ್ಯಪ್ರದೇಶ–5, ಮಹಾರಾಷ್ಟ್ರ–6, ತೆಲಂಗಾಣ–3, ಉತ್ತರ ಪ್ರದೇಶ– 10, ಉತ್ತರಾಖಂಡ–1, ಪಶ್ಚಿಮ ಬಂಗಾಳ–5, ಒಡಿಶಾ–3, ರಾಜಸ್ಥಾನ–3 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here