ಮಂಗಳೂರು: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ವರ್ಗಾವಣಾ ಮಾರ್ಗಸೂಚಿಯಂತೆ ಪಶ್ಚಿಮ ವಲಯ ಮತ್ತು ಮಂಗಳೂರು ನಗರ ವ್ಯಾಪ್ತಿಯ 108 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವರ್ಗಾಯಿಸಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಅಮಿತ್ ಸಿಂಗ್ ಆದೇಶ ಹೊರಡಿಸಿದ್ದಾರೆ.
ಪುತ್ತೂರು:ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ವರ್ಗಾವಣಾ ಮಾರ್ಗಸೂಚಿಯಂತೆ ಪುತ್ತೂರು, ವಿಟ್ಲ, ಉಪ್ಪಿನಂಗಡಿಯ 7 ಎಸ್.ಐ.ಗಳು ಸೇರಿದಂತೆ ಪೊಲೀಸ್ ಇಲಾಖೆಯ ಪಶ್ಚಿಮ ವಲಯ ಮತ್ತು ಮಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಪೊಲೀಸ್ ಠಾಣೆಗಳ 108 ಪೊಲೀಸ್ ಉಪ ನಿರೀಕ್ಷಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಅಮಿತ್ ಸಿಂಗ್ ಅವರು ಆದೇಶಿಸಿದ್ದಾರೆ.
ಪುತ್ತೂರು ನಗರ ಠಾಣಾ ಆಂಜನೇಯ ರೆಡ್ಡಿ ಬಂಟ್ವಾಳ ನಗರ ಠಾಣೆ, ಪುತ್ತೂರು ಸಂಚಾರಿ ಠಾಣಾ ಉದಯರವಿ ವೈ.ಎಂ. ಪುಂಜಾಲಕಟ್ಟೆ ಸಂಚಾರ ಠಾಣೆ, ಪುಂಜಾಲಕಟ್ಟೆ ಸಂಚಾರ ಠಾಣೆಯ ನಂದ ಕುಮಾರ್ ಎಂ. ಪುತ್ತೂರು ನಗರ ಠಾಣೆ, ಬಂಟ್ವಾಳ ಸಂಚಾರ ಠಾಣಾ ಸಂಜೀವ ಕೆ. ಪುತ್ತೂರು ಸಂಚಾರ ಠಾಣೆ, ನಗರ ಠಾಣಾ ಸೇಸಮ್ಮ ಕೆ.ಎಸ್. ಚಿಕ್ಕಮಗಳೂರು ಮಹಿಳಾ ಠಾಣೆ, ಪುತ್ತೂರು ಸಂಚಾರಿ ಠಾಣಾ ಕುಟ್ಟಿ ಮೇರ ಚಿಕ್ಕಮಗಳೂರು ನಗರ ಠಾಣೆ, ಉಪ್ಪಿನಂಗಡಿ ಸಂಚಾರ ಠಾಣೆ ಚಂದ್ರಶೇಖರ ಉಡುಪಿ ಸಂಚಾರ ಠಾಣೆ, ಪುಂಜಾಲಕಟ್ಟೆ ಠಾಣಾ ಎನ್.ಕೆ ಓಮನ ಚಿಕ್ಕಮಗಳೂರು ಬನಕಲ್ ಠಾಣೆ, ಉಪ್ಪಿನಂಗಡಿ ಠಾಣಾ ರುಕ್ಮ ನಾಯ್ಕ್ ಕಾರ್ಕಳ ಗ್ರಾಮಾಂತರ ಠಾಣೆ, ವಿಟ್ಲ ಠಾಣಾ ರತ್ನ ಕುಮಾರ್ ಎಂ. ಬ್ರಹ್ಮಾವರ ಠಾಣೆ, ಕಾರ್ಕಳ ನಗರ ಠಾಣಾ ಸುಬ್ರಹ್ಮಣ್ಯ ಹೆಚ್. ಪುತ್ತೂರು ನಗರ ಠಾಣೆ, ಉತ್ತರಕನ್ನಡ ಜಿಲ್ಲೆಯ ಮಂಕಿ ಠಾಣಾ ಭರತ್ ಕುಮಾರ್ ವಿ. ಉಪ್ಪಿನಂಗಡಿ ಠಾಣೆ, ಚಿಕ್ಕಮಗಳೂರು ಪಂಚಹಳ್ಳಿ ಠಾಣಾ ಶಾಹೀದ್ ಅಫ್ರಿದಿ ಪುತ್ತೂರು ಸಂಚಾರಿ ಠಾಣೆ, ಪಂಚಹಳ್ಳಿ ಠಾಣಾ ಲೀಲಾವತಿ ಆರ್. ಬಂಟ್ವಾಳ ಗ್ರಾಮಾಂತರ ಠಾಣೆ ಸೇರಿದಂತೆ ವಿವಿಧ ಠಾಣೆಗಳ ಒಟ್ಟು 108 ಮಂದಿ ಪೊಲೀಸ್ ಉಪ ನಿರೀಕ್ಷಕರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.
ವರ್ಗಾವಣೆಗೊಂಡ ಪಿ ಎಸ್ ಐ ಗಳ ಪಟ್ಟಿ ಇಂತಿದೆ.