ಮಂಗಳೂರು(ಕಾಸರಗೋಡು): ಉದುಮ ಮಾಂಗಾಡ್ ನಿವಾಸಿಯೋರ್ವರನ್ನು ಅಪಹರಿಸಿ ಸುಮಾರು ಐದು ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರು ಸೇರಿದಂತೆ ಏಳುಮಂದಿಯನ್ನು ಬಂಧಿಸಿದ್ದಾರೆ.
ಕೋಜಿಕ್ಕೋಡ್ ನ ಪಿ.ಫೈಝಲ್ (37), ಈತನ ಪತ್ನಿ ಎಂ. ಪಿ ಲುಬ್ನಾ (29), ಕಾಸರಗೋಡು ಶಿರಿಬಾಗಿಲಿನ ಎನ್.ಸಿದ್ದೀಕ್(48), ಮಾಂಗಾಡ್ ನ ದಿಲ್ಶಾದ್ (40), ಮುಟ್ಟತ್ತೋಡಿ ಯ ನಫೀಸತ್ ಮಿಸ್ರಿಯಾ (40), ಮಾಂಗಾಡ್ ನ ಅಬ್ದುಲ್ ಕುಂಙಿ(32) ಮತ್ತು ಪಡನ್ನಕ್ಕಾಡಿನ ರಫೀಕ್ (42) ಬಂಧಿತರು ಎಂದು ಗುರುತಿಸಲಾಗಿದೆ. ಮೇಲ್ಪರಂಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮಾಂಗಾಡ್ ತಾಮರಕ್ಕುಳಿಯ 49 ರ ಹರೆಯದ ವ್ಯಕ್ತಿಯನ್ನು ಅಪಹರಿಸಿ ಹಣ ದೋಚಲಾಗಿದೆ.ಮಾಂಗಾಡ್ ವ್ಯಕ್ತಿಯನ್ನು ಪರಿಚಯವಾದ ಲುಬ್ನಾ ಇತರರ ಸಹಾಯದಿಂದ ಮಂಗಳೂರಿಗೆ ಕರೆದೊಯ್ದಿದ್ದು, ವಸತಿ ಗೃಹ ವೊಂದರಲ್ಲಿ ಬೆದರಿಸಿ ಹಣ ಪಡೆದಿರುವುದಾಗಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಲಾಗಿತ್ತು. ಇದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.ಜನವರಿ 29 ರಂದು ಘಟನೆ ನಡೆದಿತ್ತು. ವಸತಿ ಗೃಹ ದಲ್ಲಿ ವಿವಸ್ತ್ರ ದಲ್ಲಿ ನಿಲ್ಲಿಸಿ ಫೋಟೋ ತೆಗೆದು ಬೆದರಿಸಿದ್ದು, ಬ್ಲ್ಯಾಕ್ ಮೇಲ್ ನಡೆಸಿ ಹಣ ದೋಚಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ .