ಅಪ್ರತಿಮ ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ನಿಧನ-ಕಳಚಿದ ಬಣ್ಣ-ಶಾಶ್ವತವಾಗಿ ಉಳಿದ ಹುಲಿಯ ಹೆಜ್ಜೆ ಗುರುತು

ಮಂಗಳೂರು(ಉಡುಪಿ): ಅಪ್ರತಿಮ ಹುಲಿವೇಷಧಾರಿ ಉಡುಪಿ ಕಾಡಬೆಟ್ಟುವಿನ ಅಶೋಕ್ ರಾಜ್ ಫೆ.1ರ ಸಂಜೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಉಡುಪಿಯ ಕಾಡಬೆಟ್ಟುವಿನಲ್ಲಿ ಹುಲಿವೇಷ ತಂಡವನ್ನು ಕಟ್ಟಿ ಟೈಗರ್ ಕಿಂಗ್ ಎಂದೇ ಖ್ಯಾತಿ ಪಡೆದಿದ್ದರು. 2023 ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಹುಲಿವೇಷ ಕಾರ್ಯಕ್ರಮ ನೀಡುತಿದ್ದ ಸಂಧರ್ಭದಲ್ಲಿ ಅಸ್ವಸ್ಥರಾಗಿದ್ದ ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆ ಬಳಿಕ ಉಡುಪಿ ಮತ್ತು ಮಣಿಪಾಲದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಕಳೆದ 26 ವರ್ಷಗಳಿಂದ ಹುಲಿವೇಷ ಧರಿಸಿ ಅಷ್ಟಮಿ, ಮತ್ತು ಇನ್ನಿತರ ಸಂಧರ್ಭದಲ್ಲಿ ತಮ್ಮ ತಂಡದೊಂದಿಗೆ ಅವರು ಜನರಿಗೆ ಮನರಂಜನೆ ನೀಡುತ್ತಿದ್ದರು. ಅಶೋಕ್ ರಾಜ್ ಉಡುಪಿಯಲ್ಲಿ ಹಲವಾರು ಹುಲಿವೇಷ ಧಾರಿಗಳಿಗೆ ತರಬೇತಿ ನೀಡಿದವರಾಗಿದ್ದು ಗುರುಸ್ಥಾನ ಹೊಂದಿದ್ದರು. ಇಪ್ಪತ್ತೈದು ವರುಷ ಹಿಂದೆ ಅಂತರಾಷ್ಟ್ರೀಯ ಮಟ್ಟದ ಬಿ.ಬಿ.ಸಿ ವಾಹಿನಿಯ ತಂಡಕ್ಕೆ ಪ್ರೊಫೆಸರ್ ಎಸ್ ಎ. ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು.

LEAVE A REPLY

Please enter your comment!
Please enter your name here