



ಮಂಗಳೂರು: ಖ್ಯಾತ ಮಾಡೆಲ್ ಮತ್ತು ನಟಿ ಪೂನಂ ಪಾಂಡೆ (32) ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಫೆಬ್ರವರಿ 2 ರಂದು ಕೊನೆಯುಸಿರೆಳೆದಿದ್ದಾರೆ.







ನಟಿ ಹಾಗೂ ಮಾಡೆಲ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಪೂನಂ ವಿವಾದಗಳಿಂದಲೇ ಜನಪ್ರಿಯತೆ ಪಡೆದಿದ್ದರು. ಉತ್ತರ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಪೂನಂ ಕೊನೆಯುಸಿರೆಳೆದಿರುವುದಾಗಿ ಆಕೆಯ ಮ್ಯಾನೇಜರ್ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮರಣ ವಾರ್ತೆಯನ್ನು ಖಚಿತ ಪಡಿಸಿದ್ದಾರೆ.















