ಮಂಗಳೂರು(ಪಾಟ್ನಾ): ಮದ್ಯ ಸೇವಿಸಿದ ಪ್ರಕರಣದಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸುವ ನಿಟ್ಟಿನಲ್ಲಿ ಪೊಲೀಸ್ ವಾಹನ ಮಹೀಂದ್ರಾ ಸ್ಕಾರ್ಪಿಯೋದಲ್ಲಿ ಕರೆದುಕೊಂಡು ಹೋಗಲಾಗಿತ್ತು. ದುರದೃಷ್ಟವಶಾತ್ ಡೀಸಲ್ ಖಾಲಿಯಾಗಿ ನಡುರಸ್ತೆಯಲ್ಲಿ ವಾಹನ ನಿಂತಿದೆ. ಓರ್ವ ಪೊಲೀಸ್ ವಾಹನ ಚಲಾಯಿಸುತ್ತಿದ್ದರೆ ಉಳಿದ ಪೊಲೀಸರು ಆರೋಪಿಗಳ ಬಗ್ಗೆ ನಿಗಾ ವಹಸಿದ್ದರು. ಈ ವೇಳೆ ಆರೋಪಿಗಳನ್ನು ಕಾರಿನಿಂದ ಕೆಳಗಿಳಿಸಿದ ಪೊಲೀಸ್ ಅಧಿಕಾರಿ ಕಾರನ್ನು ತಳ್ಳಲು ಹೇಳಿದ್ದಾರೆ.
ನಾಲ್ವರು ಆರೋಪಿಗಳನ್ನು ಪರಸ್ಪರ ಹಗ್ಗದಿಂದ ಕಟ್ಟಿ ವಾಹನ ತಳ್ಳುವಂತೆ ಆದೇಶಿಸಿದ್ದಾರೆ. ಆರೋಪಿಗಳು ವಾಹನ ತಳ್ಳುವ ದೃಶ್ಯವನ್ನು ನೋಡುಗರು ಮೊಬೈಲ್ ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಆರೋಪಿಗಳು ವಾಹನವನ್ನು 500 ಮೀಟರ್‌ಗೂ ಹೆಚ್ಚು ದೂರ ತಳ್ಳಿದ್ದಾರೆ ಎನ್ನಲಾಗಿದೆ. ಭಾರೀ ಪ್ರಮಾದಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಗಳ ಈ ನಡೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
पुलिस की गाड़ी में पेट्रोल खत्म, कैदियों ने मारा धक्का
नवगछिया से 4 कैदी पेशी के लिए आए भागलपुर, कोर्ट के 500 मीटर पहले गाड़ी रुक गई pic.twitter.com/IawDYq2uBU
— FirstBiharJharkhand (@firstbiharnews) February 3, 2024