ಸ್ಥಳೀಯಾಡಳಿತದ ಗಮನ ಸೆಳೆಯಲು ವಿಶಿಷ್ಟ ಯೋಜನೆ-ಗಬ್ಬೆದ್ದು ನಾರುತ್ತಿರುವ ರಸ್ತೆಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿಗಳು-ರಸ್ತೆ ಸ್ವಚ್ಛಗೊಳಿಸಲು ಮುಂದಾದ ಸ್ಥಳೀಯ ಸಂಸ್ಥೆ 

ಮಂಗಳೂರು(ಆಗ್ರಾ): ಗಬ್ಬೆದ್ದು ನಾರುತ್ತಿರುವ ರಸ್ತೆಯಲ್ಲೇ ದಂಪತಿ ಹಾರ ಬದಲಿಸಿಕೊಂಡು ತಮ್ಮ 17ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.

ಭಗವಾನ್ ಶರ್ಮಾ ಹಾಗೂ ಉಷಾದೇವಿ ಕೊಳಕು ನೀರು ತುಂಬಿದ್ದ ರಸ್ತೆಯಲ್ಲೇ ನಿಂತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಗಬ್ಬು ನಾರುತ್ತಿರುವ ಚರಂಡಿ ಮತ್ತು ಕಸದ ನಡುವೆ ಹಾರ ಬದಲಿಸಿಕೊಂಡಿದ್ದಾರೆ. 15 ವರ್ಷಗಳಿಂದ ಈ ಪ್ರದೇಶ ಕೊಳಕು ನಾರುತ್ತಿದೆ. ರಸ್ತೆಗಳೆಲ್ಲ ಗಬ್ಬೆದ್ದು ಹೋಗಿವೆ. ಇಲ್ಲಿನ ಸ್ಥಳೀಯಾಡಳಿತ ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು, ಸ್ಥಳೀಯಾಡಳಿತದ ಗಮನ ಸೆಳೆಯಲು ಕೊಳಕು ತುಂಬಿದ ರಸ್ತೆಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ ಎನ್ನಲಾಗಿದೆ. ಲಕ್ಷದ್ವೀಪ ಅಥವಾ ಮಾಲ್ಡೀವ್ಸ್ನಲ್ಲಿ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕೆಂದು ದಂಪತಿ ನಿರ್ಧರಿಸಿದ್ದರು. ಆದ್ರೆ, ಸ್ಥಳೀಯಾಡಳಿತದ ಉದಾಸೀನದ ವರ್ತನೆಯಿಂದ ಬೇಸತ್ತು ಹೋಗಿ, ಇಲ್ಲಿಯೇ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯ ಅಧಿಕಾರಿಗಳು ರಸ್ತೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here