ಡೆಂಘಿ ಜ್ವರದಿಂದ ಕಾಲೇಜು ವಿದ್ಯಾರ್ಥಿನಿ ಮೃತ್ಯು

ಮಂಗಳೂರು(ಚಿಕ್ಕಮಗಳೂರು): ಮಂಗನಕಾಯಿಲೆ ಹಾವಳಿ ತೀವ್ರಗೊಳ್ಳುತ್ತಿರುವುದರ ನಡುವೆ ಕಾಫಿನಾಡಿನಲ್ಲಿ ಡೆಂಘಿ ಜ್ವರ ಹೆಚ್ಚುತ್ತಿರುವುದು ಸ್ಥಳೀಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಫೆ.7ರ ರಾತ್ರಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಡೆಂಘಿ ಜ್ವರಕ್ಕೆ ಬಲಿಯಾಗಿದ್ದಾಳೆ.

ನಗರದ ಮುಹಮ್ಮದ್ ಖಾನ್ ಬಡಾವಣೆ ನಿವಾಸಿ ಸಹರಾ ಬಾನು(18) ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ. ನಗರದ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸಹರಾ ಕೆಲದಿನಗಳಿಂದ ಡೆಂಘಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಫೆ.7ರ ರಾತ್ರಿ ಸಹರಾ ಕೊನೆಯುಸಿರೆಳೆದಿದ್ದಾರೆ. ಮುಹಮ್ಮದ್ ಖಾನ್ ಬಡಾವಣೆಯಲ್ಲಿ ಇತ್ತೀಚೆಗೆ ಯುಜಿಡಿ ಒಡೆದು ಕೊಳಚೆ ನೀರು ಚರಂಡಿಯಲ್ಲಿ ತುಂಬಿ ನಿಂತಿದ್ದು, ಇದರಿಂದ ಬಡಾವಣೆಯಲ್ಲಿ ಸೊಳ್ಳೆಗಳು ಹೆಚ್ಚಾಗಿ ಡೆಂಘಿ ರೋಗ ಹರಡಿದೆ ಎಂದು ಸ್ಥಳೀಯರು ದೂರಿದ್ದಾರೆ.

 

 

LEAVE A REPLY

Please enter your comment!
Please enter your name here