ಬಿಎಂಟಿಸಿ ಬಸ್‌ನಲ್ಲಿ ಮಹಿಳಾಮಣಿಗಳ ಮಾರಾಮಾರಿ-ಚಪ್ಪಲಿ ಹಿಡಿದು ಹೊಡೆದಾಟ

ಮಂಗಳೂರು(ಬೆಂಗಳೂರು): ಬಸ್‍ನ ಕಿಟಕಿ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದು, ತಾರಕಕ್ಕೇರಿ ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬಸ್‌ ನಲ್ಲಿ ಮಹಿಳೆಯರ ಹೊಡೆದಾಟಕ್ಕೆ ಸಹಪ್ರಯಾಣಿಕರು ಶಾಕ್‌ ಆಗಿದ್ದಾರೆ. ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಹೊರಟಿದ್ದ ಕೆಎ 57 ಎಫ್ 4255 ನಂಬರ್‌ನ ಬಿಎಂಟಿಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ. ಮುಂದಿನ ಸೀಟ್‍ನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಹಿಂದಿನ ಸೀಟ್‍ನಲ್ಲಿ ಕುಳಿತ ಮಹಿಳೆಯ ನಡುವೆ ಬಸ್‍ನ ಕಿಟಕಿ ವಿಚಾರಕ್ಕೆ ಪ್ರಾರಂಭದಲ್ಲಿ ಸಣ್ಣ ಮಟ್ಟದ ಮಾತುಕತೆ ನಡೆದಿದ್ದು, ಕೆಲ ಸಮಯದ ಬಳಿಕ ಜಗಳ ತಾರಕಕ್ಕೇರಿ ಪರಸ್ಪರ ಹೊಡೆದಾಡುವ ಮಟ್ಟಕ್ಕೆ ಮುಂದುವರಿದಿದೆ. ಹಿಂದೆ ಕುಳಿತಿದ್ದ ಮಹಿಳೆ ಮುಂದೆ ಕುಳಿತಿದ್ದ ಮಹಿಳೆಗೆ ಏಕಾಏಕಿಯಾಗಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಬಳಿಕ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಬಸ್‍ನಲ್ಲಿದ್ದ ಜನ ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಗಲಾಟೆಯ ವೀಡಿಯೋ ಬಸ್‍ನಲ್ಲಿದ್ದ ಸಹ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ.

LEAVE A REPLY

Please enter your comment!
Please enter your name here