ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಗರ್ಭಿಣಿಯರಾಗುತ್ತಿರುವ ಮಹಿಳಾ ಖೈದಿಗಳು-196 ಶಿಶುಗಳ ಜನನ

ಮಂಗಳೂರು: ಪಶ್ಚಿಮ ಬಂಗಾಳದ ಜೈಲುಗಳಲ್ಲಿ ಮಹಿಳಾ ಖೈದಿಗಳ ಸ್ಥಿತಿಗತಿ ಬಗ್ಗೆ ಕಲ್ಕತ್ತಾ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಕೊಲ್ಕತ್ತಾದ ಜೈಲುಗಳಲ್ಲಿ ಮಹಿಳಾ ಖೈದಿಗಳು ಗರ್ಭಿಣಿಯರಾಗುತ್ತಿರುವ ಅಘಾತಕಾರಿ ಸುದ್ದಿ ಹೊರಬಿದ್ದಿದೆ. ಕಸ್ಟಡಿಯಲ್ಲಿದ್ದಾಗ ಮಹಿಳಾ ಖೈದಿಗಳು ಗರ್ಭಿಣಿಯರಾದ ಬಗ್ಗೆ ಹೈಕೋರ್ಟಿಗೆ ಐಪಿಎಲ್‌ ಸಲ್ಲಿಕೆಯಾಗಿದೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಅರ್ಜಿ ವಿಚಾರಣೆಯಲ್ಲಿ ವಾದ ಮಂಡಿಸಿದ ವಕೀಲರು ಇತ್ತೀಚಿಗೆ ಜೈಲಿಗೆ ಭೇಟಿ ನೀಡಿದ್ದ ವೇಳೆ ಜೈಲಿನಲ್ಲಿ 15 ಮಂದಿ ಗರ್ಭಿಣಿಯರಿದ್ದರು. ಇದುವರೆಗೆ ಜೈಲಿನಲ್ಲಿ 196 ಮಕ್ಕಳು ಹುಟ್ಟಿವೆ ಎನ್ನುವ ಆತಂಕಕಾರಿ ಅಂಶ ಬಿಚ್ಚಿಟ್ಟಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಷಯ ಬಹಳ ಗಂಭೀರವಾಗಿದ್ದು ಇದೊಂದು ಕ್ರಿಮಿನಲ್‌ ಪ್ರಕರಣವಾಗಿದೆ, ಹೀಗಾಗಿ ಸುಧಾರಣಾ ಗೃಹಗಳಿಗೆ ಪುರುಷ ಉದ್ಯೋಗಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ನೀಡಿದೆ.

 

LEAVE A REPLY

Please enter your comment!
Please enter your name here