ಪಿ ವಿ ನರಸಿಂಹ ರಾವ್‌, ಚೌಧುರಿ ಚರಣ್‌ ಸಿಂಗ್‌, ಎಂ ಎಸ್‌ ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ

ಮಂಗಳೂರು(ಹೊಸದಿಲ್ಲಿ): ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹ ರಾವ್‌, ಚೌಧುರಿ ಚರಣ್‌ ಸಿಂಗ್‌ ಹಾಗೂ ಕೃಷಿ ತಜ್ಞ ಹಾಗೂ ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂದೇ ಖ್ಯಾತಿ ಪಡೆದ ಎಂ ಎಸ್‌ ಸ್ವಾಮಿನಾಥನ್‌ ಅವರಿಗೆ ಮರಣೋತ್ತರವಾಗಿ ಇಂದು ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ.

ಈ ಕುರಿತು ಟ್ವೀಟ್‌ ಮಾಡಿದ ಪ್ರಧಾನಿ ನರೇಂದ್ರ ಮೋದಿ ಪಿ ವಿ ನರಸಿಂಹ ರಾವ್‌ ಆವರ ದೂರದೃಷ್ಟಿಯ ನಾಯಕತ್ವ ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಿತ್ತು ಹಾಗೂ ದೇಶದ ಪ್ರಗತಿ ಮತ್ತು ಸಮೃದ್ಧಿಗೆ ಭದ್ರ ಅಡಿಪಾಯ ಹಾಕಿತ್ತು,” ಎಂದು ಹೇಳಿದ್ದಾರೆ. “ಒಬ್ಬ ರಾಜಕೀಯ ಮುತ್ಸದ್ದಿಯಾಗಿ ನರಸಿಂಹ ರಾವ್‌ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸಂಸದರಾಗಿ ಅವರ ಸೇವೆ ಸ್ತುತ್ಯಾರ್ಹ,” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಎಂ ಎಸ್‌ ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಿಸಿರುವ ಕುರಿತಂತೆ ಟ್ವೀಟ್‌ ಮಾಡಿರುವ ಪ್ರಧಾನಿ ಅವರು ದೇಶದ ಕೃಷಿ ಕ್ಷೇತ್ರಕ್ಕೆ ಮತ್ತು ಕೃಷಿಕರ ಕಲ್ಯಾಣಕ್ಕೆ ನೀಡಿದ ಅಭೂತಪೂರ್ವ ಕೊಡುಗೆಗಳನ್ನು ಶ್ಲಾಘಿಸಿದರು. ಅವರ ಪರಿಶ್ರಮದಿಂದ ಭಾರತದಲ್ಲಿ ಆಹಾರ ಭದ್ರತೆಗೆ ದೊಡ್ಡ ಕೊಡುಗೆ ದೊರೆತಿದೆ,” ಎಂದೂ ಅವರು ಹೇಳಿದ್ದಾರೆ. ಪಿ ವಿ ನರಸಿಂಹ ರಾವ್‌, ಚೌಧುರಿ ಚರಣ್‌ ಸಿಂಗ್‌, ಎಂ ಎಸ್‌ ಸ್ವಾಮಿನಾಥನ್‌ ಅವರಿಗೆ ಭಾರತರತ್ನ ಘೋಷಿಸಿರುವುದನ್ನು ಸೋನಿಯಾ ಗಾಂಧಿ ಸ್ವಾಗತಿಸಿದ್ದಾರೆ.

LEAVE A REPLY

Please enter your comment!
Please enter your name here