ನೀರಿನ ಸಮಸ್ಯೆ – ಬೆಂದೂರ್‌ವೆಲ್‌ ಪಂಪ್‌ಹೌಸ್‌ ನಲ್ಲಿ ಮಹಿಳೆಯರಿಂದ ಮೌನ ಧರಣಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ವಿಪರೀತ ಏರಿಕೆಯಾಗುತ್ತಿದೆ. ಇದರ ಪರಿಣಾಮ ಮಂಗಳೂರು ನಗರ ಸೇರಿದಂತೆ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.‌

ಮಂಗಳೂರಿನ ಕೊಡಿಯಾಲ್‌ಬೈಲ್, ಕಾರ್‌ಸ್ಟ್ರೀಟ್ ಸುತ್ತಮುತ್ತಲಿನ ಭಾಗದ ಕೆಲ ನಾಗರಿಕರು ಸ್ಥಳೀಯ ಕಾರ್ಪೊರೇಟರ್ ನೇತೃತ್ವದಲ್ಲಿ ಇಂದು(ಫೆ.10) ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿ ಮೌನ ಧರಣಿ ನಡೆಸಿದರು. ಕಾರ್ಪೊರೇಟರ್ ಪೂರ್ಣಿಮಾ ನೇತೃತ್ವದಲ್ಲಿ ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿದ ನೊಂದ ಸ್ಥಳೀಯರು ನೀರು ಪೂರೈಕೆಯ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here