ಮಂಗಳೂರು(ಸುಂಟಿಕೊಪ್ಪ): ಪಟ್ಟಣದಲ್ಲಿ ಜ.28ರ ತಡರಾತ್ರಿ ಸರಣಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೋಲೀಸರು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚಿಕ್ಕಮಳ್ಳೂರು ಗ್ರಾಮದ ನಿವಾಸಿ ಆಟೋಚಾಲಕ ಮಹಮದ್ ಆಶ್ರಫ್ (39) ಬಂಧಿತ ಆರೋಪಿ. ಪಟ್ಟಣದಲ್ಲಿ ಸರಣಿ ಕಳ್ಳತನ ನಡೆಸಿ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದ್ದ ಪ್ರಕರಣವನ್ನು 13 ದಿನಗಳಲ್ಲಿ ಭೇಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾರ್ಗದರ್ಶನದ ಮೇರೆಗೆ ಸೋಮವಾರಪೇಟೆ ಉಪವಿಭಾಗ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನೀರೀಕ್ಷಕ ಕೆ.ರಾಜೇಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಸಿ ಕಳ್ಳತನಕ್ಕೆ ಸಂಬಂಧಿಸಿದ ನಗದು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೋರ್ವ ಆರೋಪಿಯನ್ನು ಬಂಧಿಸಲು ಕ್ರಮಕೈಗೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಸುಂಟಿಕೊಪ್ಪ ಪಿಎಸ್ಐ ಎಂ.ಸಿ.ಶ್ರೀಧರ್, ಅಪರಾಧ ಪತ್ತೆ ದಳದ ಪಿಎಸ್ ಐ ನಾಗರಾಜ್, ಮುಖ್ಯಪೇದೆ ಸತೀಶ್, ಪೇದೆಗಳಾದ ಜಗದೀಶ್, ಉದಯ್, ಪ್ರವೀಣ್ ಮತ್ತು ರಂಜಿತ್ ಕುಮಾರ್ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ