ಸರ್ಪರಾಜ್ ಖಾನ್ ಟೆಸ್ಟ್‌ ಕ್ರಿಕೆಟ್‌ ಗೆ ಪಾದಾರ್ಪಣೆ-ಭಾವುಕರಾದ ತಂದೆ ನೌಶಾದ್ ಖಾನ್ 

ಮಂಗಳೂರು(ರಾಜ್ ಕೋಟ್): ಹಲವು ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಮುಂಬೈನ ಆಟಗಾರ ಸರ್ಫರಾಜ್ ಖಾನ್ ಅವರಿಗೆ ಟೆಸ್ಟ್ ಕ್ಯಾಪ್ ಸಿಕ್ಕಿದೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸರ್ಪರಾಜ್ ಖಾನ್ ಟೆಸ್ಟ್‌ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದ್ದಾರೆ.

ರಾಜ್ ಕೋಟ್ ನಲ್ಲಿ ಪಂದ್ಯಕ್ಕೂ ಮುನ್ನ ಮಾಜಿ ನಾಯಕ ಅನಿಲ್ ಕುಂಬ್ಳೆ, ಸರ್ಫರಾಜ್ ಖಾನ್ ಗೆ ಟೆಸ್ಟ್ ಕ್ಯಾಪ್ ನೀಡಿದರು. ಸರ್ಫರಾಜ್ ತಂದೆ ನೌಶಾದ್ ಖಾನ್ ರಾಜ್ ಕೋಟ್ ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ಮಗನ ಈ ಐತಿಹಾಸಿಕ ಸನ್ನಿವೇಶವನ್ನು ಕಣ್ತುಂಬಿಕೊಂಡರು. ಇದೇ ವೇಳೆ ಭಾವುಕರಾದ ನೌಶಾದ್ ಖಾನ್ ಮಗನಿಗಾಗಿ ಸಂತಸ ವ್ಯಕ್ತಪಡಿಸಿದರು. ಕಣ್ಣೀರು ಹರಿಸುತ್ತಲೇ ಮಗನನ್ನು ಅಪ್ಪಿಕೊಂಡರು. ಇದೇ ವೇಳೆ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೆಲ್ ಕೂಡಾ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ಜುರೆಲ್ ಗೆ ದಿನೇಶ್ ಕಾರ್ತಿಕ್ ಟೆಸ್ಟ್ ಕ್ಯಾಪ್ ನೀಡಿ ಹಾರೈಸಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here