ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನಗಳ ಬ್ಯಾಟರಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಟ್ರಕ್‌ಗಳ ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಜ.29ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯಾದ ತಲಪಾಡಿ ಕಜೆ ಸಮೀಪದ ಕೆಳಗಿನ ಮನೆ ನಿವಾಸಿ ರಿಯಾಜ್ ತಲಪಾಡಿ ಎಂಬಾತನನ್ನು ಫೆ.14ರಂದು ನಾಟೆಕಲ್‌ನಲ್ಲಿ ಬಂಧಿಸಿ ಆರೋಪಿ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಕದ್ದ ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪತ್ತೆ ಕಾರ್ಯದಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಮಾರ್ಗದರ್ಶನದಂತೆ ಡಿಸಿಪಿ ಸಿದ್ದಾರ್ಥ ಗೋಯಲ್ ಮತ್ತು ದಿನೇಶ್‌ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಧನ್ಯ ಎನ್ ನಾಯಕ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವೀಂದ್ರ ಸಿ ಎಂ, ಪೊಲೀಸ್ ಉಪ ನಿರೀಕ್ಷಕರಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಸಂಜೀವ್ ಎಎಸ್ಐ ,ರೇಶ್ಯಾ, ಸಂತೋಷ್ ಕೆ ಸಿ, ಬಸವನಗೌಡ, ಸುರೇಶ್ ತಳವಾರ್ ಭಾಗವಹಿಸಿದ್ದರು.