ಬಸ್ನಲ್ಲಿ ಎಣ್ಣೆ ಹೊಡೆದ ಮಹಿಳಾ ಕ್ರಿಕೆಟ್ ತಂಡದ ಕೋಚ್-ರೆಡ್ ಹ್ಯಾಂಡ್ ಆಗಿ ಕ್ಯಾಮೆರಾ ಕಣ್ಣಿಗೆ-ಸಸ್ಪೆಂಡ್ ಮಾಡಿದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್

ಮಂಗಳೂರು(ಹೈದರಾಬಾದ್): ಟೀಮ್ ಬಸ್ನಲ್ಲಿಯೇ ಮದ್ಯಪಾನ ಮಾಡಿದ ಹೈದರಾಬಾದ್ ಹಿರಿಯ ಮಹಿಳಾ ತಂಡದ ಮುಖ್ಯ ಕೋಚ್ ಜೈಸಿಂಹ ಅವರನ್ನು ಅಮಾನತುಗೊಳಿಸಲಾಗಿದೆ.

ಜೈಸಿಂಹ ಅವರು ತಂಡದ ಬಸ್ನಲ್ಲಿ ಮದ್ಯವನ್ನು ಸಾಗಿಸಿದ್ದಲ್ಲದೆ, ಸೇವಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ಅಲ್ಲದೆ, ಆಟಗಾರ್ತಿಯರ ಜತೆ ಅನುಚಿತ ವರ್ತನೆ ತೋರಿದ್ದ ವಿಡಿಯೊ ವೈರಲ್ ಆಗುತ್ತಿದ್ದಂತೆ ಅವರನ್ನು ಅಮಾನತು ಮಾಡಲಾಗಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನ ಮೋಹನ್ ರಾವ್ ತಕ್ಷಣ ಮಧ್ಯಪ್ರವೇಶಿಸಿ, ಮುಂದಿನ ಸೂಚನೆ ಬರುವವರೆಗೆ ದೇಶದಲ್ಲಿ ಹಾಗೂ ಇನ್ನಿತರ ಎಲ್ಲಾ ಕಡೆ ಕ್ರಿಕೆಟ್ ಸಂಬಂಧಿತ ಚಟುವಟಿಕೆಗಳಿಂದ ದೂರವಿರಲು ಜೈಸಿಂಹ ಅವರಿಗೆ ಸೂಚನೆ ನೀಡಿದ್ದಾರೆ.

LEAVE A REPLY

Please enter your comment!
Please enter your name here