ಮಾ.2: ಅಬುಧಾಬಿ ಯುನಿವರ್ಸಿಟಿ ಲಿಮ್ಯಾಕ್ಸ್ ಮೈದಾನದಲ್ಲಿ ಕಾಸ್ರೋಟ್‌ ಕಾರ್ ಸೋಕರ್ ಫೇಸ್ಟ್ ಸೀಸನ್-7 ಫುಟ್‌ಬಾಲ್ ಪಂದ್ಯಾಟ

ಮಂಗಳೂರು: ಅಬುಧಾಬಿ ಕಾಸ್ರೋಟ್‌ ಕಾರ್ ಸೋಕರ್ ಫೇಸ್ಟ್ ಸೀಸನ್-7 ಫುಟ್‌ಬಾಲ್ ಪಂದ್ಯಾಟ ಮಾ.2 ರಂದು ಅಬುಧಾಬಿ ಯುನಿವರ್ಸಿಟಿಯ ಲಿಮ್ಯಾಕ್ಸ್ ಮೈದಾನದಲ್ಲಿ ನಡೆಯಲಿದೆ.

ಅನಿವಾಸಿ ಕಾಸರಗೋಡು ನಿವಾಸಿಗಳನ್ನು ಒಳಗೊಂಡ 8 ತಂಡಗಳ ನಡುವೆ ಈ ಫುಟ್‌ಬಾಲ್ ಪಂದ್ಯಾಟ ನಡೆಯಲಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಬುಧಾಬಿ ಕಾಸ್ರೋಟ್‌ ಕಾರ್ ಸ್ವದೇಶದಲ್ಲಿ ಮತ್ತು ವಿದೇಶದಲ್ಲಿ ನಡೆಸುತ್ತಿರುವ ಕಾರುಣ್ಯ ಚಾರಿಟಿ ಟ್ರಸ್ಟ್‌ ನ ಜನಸ್ನೇಹಿ ಪ್ರವರ್ತನೆಯ ಕಾರ್ಯಕ್ರಮಗಳ ಸಹಾಯಾರ್ಥವಾಗಿ ಈ ಸೋಕರ್ ಫೇಸ್ಟ್ ಆಯೋಜಿಸಲಾಗಿದೆ. ಸೋಕರ್ ಫೇಸ್ಟ್ ನ 7ನೇ ಸೀಸನ್ ಪಂದ್ಯಾಟ ಇದಾಗಿದ್ದು, ಊರ ಪರವೂರ ಜನತೆಯ ಸಹಕಾರವನ್ನು ಕೋರಲಾಗಿದೆ. ಕಾಸರಗೋಡು ಪ್ರೆಸ್‌ಕ್ಲಬ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಮ್ಮದ್ ಅಲಂಪಾಡಿ, ಹಸೈನಾರ್ ಚೇರೂರ್, ಜಾಬೀರ್ ನೀರ್ಚಾಲ್, ಅಶ್ರಫ್ ನಾಲ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here