ತಪಸ್ಯ ಬೀಚ್‌ ಫೆಸ್ಟಿವಲ್‌-ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯ ಮಟ್ಟದ ಬೀಚ್‌ ಕುಸ್ತಿ ಸ್ಪರ್ಧೆ-ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್‌ ಶೆಟ್ಟಿ ಅವರಿಂದ ಕುಸ್ತಿ ಸ್ಪರ್ಧೆಗೆ ಚಾಲನೆ

ಮಂಗಳೂರು: ತಪಸ್ಯ ಫೌಂಢೇಶನ್‌ ಮಂಗಳೂರು ವತಿಯಿಂದ ತಪಸ್ಯ ಬೀಚ್‌ ಫೆಸ್ಟಿವಲ್‌ ಕಳೆದ ಕೆಲ ದಿನಗಳಿಂದ ಮಂಗಳೂರಿನ ಪ್ರವಾಸಿ ತಾಣ ತಣ್ಣೀರ್‌ ಬಾವಿ ಬೀಚ್‌ನಲ್ಲಿ ನಡೆಯುತ್ತಿದೆ. ಈ ಹಿನ್ನಲೆ ಫೆ.16 ರಂದು ಕರ್ನಾಟಕ ರೆಸ್ಲಿಂಗ್‌ ಅಸೋಸಿಯೇಶನ್ ವತಿಯಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟ ನಡೆಯಿತು.

ರಾಜ್ಯಮಟ್ಟದ ಬೀಚ್ ಕುಸ್ತಿ ಪಂದ್ಯಾಟದ ಉದ್ಘಾಟನೆಯನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್‌ ಶೆಟ್ಟಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ತಪಸ್ಯ ಫೌಂಢೇಶನ್‌ ನ ಮ್ಯಾನೇಜಿಂಗ್ ಟ್ರಸ್ಟಿ ಸಬಿತಾ ಶೆಟ್ಟಿ, ಟ್ರಸ್ಟಿ ನವೀನ್ ಹೆಗ್ಡೆ ಲಯನ್ಸ್ ಜಿಲ್ಲಾ ಗವರ್ನರ್‌ ಡಾ. ಮೆಲ್ವಿನ್‌ ಡಿ ಸೋಜ ಮತ್ತು ತಪಸ್ಯ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 260 ಕುಸ್ತಿ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 40 ಹೆಚ್ಚಿನ ನುರಿತ ಕುಸ್ತಿ ತಾಂತ್ರಿಕ ಸಿಬ್ಬಂದಿಗಳು ಪಂದ್ಯಾಟವನ್ನು ನಡೆಸಿಕೊಟ್ಟರು. ಮಹಿಳೆಯರಿಗೆ ಮತ್ತು ಯುವಕರಿಗೆ ವಯೋಮಿತಿಯ ಆಧಾರದ ಮೇಲೆ ಮತ್ತು, ದೇಹ ತೂಕದ ಆಧಾರದ ಮೇಲೆ ಕುಸ್ತಿ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ಕರ್ನಾಟಕದ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲಿ ರಾಜ್ಯ ಮಟ್ಟದ ಬೀಚ್‌ ಕುಸ್ತಿ ಸ್ಪರ್ಧೆ ನಡೆದಿದೆ. ಕುಸ್ತಿ ಪಂದ್ಯಾಟದಲ್ಲಿ ಅನೇಕ ಗಣ್ಯ ಅತಿಥಿಗಳು, ಪೈಲ್ವಾನ್‌ಗಳು ಹಾಗೂ ಕುಸ್ತಿ ಪಟುಗಳು ಭಾಗವಹಿಸಿದರು.

ಫೆ. 17 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ಕುಸ್ತಿ ಪಟುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕುಸ್ತಿ ಸಂಘದ ಉಪಾಧ್ಯಕ್ಷರಾದ ಸುಜಿತ್ ರೈ, ಎಕ್ಸ್‌ಕ್ಯೂಟಿವ್‌ ಮೆಂಬರ್‌ ರಾಮ್‌ದಾಸ್‌ ಶೆಟ್ಟಿ, ಲಯನ್ಸ್‌ ಕ್ಲಬ್‌ನ ಮಾಜಿ ಗವರ್ನರ್‌ ಗಳಾದ ವಸಂತ್‌ ಕುಮಾರ್‌ ಶೆಟ್ಟಿ, ಸಂಜಿತ್ ಶೆಟ್ಟಿ ,ಮುಖ್ಯ ಸಂಯೋಜಕರಾದ ಲಯನ್. ನಿತ್ಯಾನಂದ ಶೆಟ್ಟಿ, ಮತ್ತು ಲ.ಕೃಷ್ಣ ಶೆಟ್ಟಿ ತಾರೆಮಾರ್‍, ತಪಸ್ಯ ತಂಡದ ಪದಾಧಿಕಾರಿಗಳು ಮತ್ತು ಮತ್ತು ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಕರ್ನಾಟಕ ಕುಸ್ತಿ ಸಂಘದ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ವಿನೋದ್ ಕುಮಾರ್ ಹಾಗೂ ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಎರಡು ದಿನಗಳಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾಟವು ಮಂಗಳೂರಿಗರ ಗಮನ ಸೆಳೆಯಿತು.

ಸಮಗ್ರ ಪ್ರಶಸ್ತಿ ಪುರುಷರ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ, ಪ್ರಥಮ ಸ್ಥಾನ, ಮಹಿಳಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆ, ಪ್ರಥಮ ಸ್ಥಾನ, ಮಹಿಳಾ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ದಕ್ಷಿಣಕನ್ನಡ ಜಿಲ್ಲೆ ಹಾಗೂ ಜೂನಿಯರ್ ವಿಭಾಗದಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here