ಭಜರಂಗದಳ ಕಾರ್ಯಕರ್ತರಿಗೆ ಗೂಂಡಾ ಕಾಯ್ದೆ ಹಾಕಿದ್ದೆ, ಅಧಿವೇಶನದಲ್ಲಿ ಅಶೋಕ್ ಹೇಳಿಕೆ- ಭಜರಂಗದಳ ಕೆಂಡಾಮಂಡಲ-‘ಅಡ್ಜಸ್ಟ್ ಮೆಂಟ್ ಅಶೋಕ್’ ರವರೇ ಪ್ರತಿರೋಧ ಎದುರಿಸಲು ಸಿದ್ದರಾಗಿ-ಭಜರಂಗದಳ ಮಂಗಳೂರು ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ಧಮ್ಕಿ

ಮಂಗಳೂರು: ಗೃಹ ಸಚಿವನಾಗಿದ್ದಾಗ ಭಜರಂಗದಳದವರ ವಿರುದ್ಧ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೊಂಡ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರುದ್ದ ಭಜರಂಗದಳ ಕಿಡಿಕಾರಿದೆ.

ಅಶೋಕ್ ಹೇಳಿಕೆ ವಿರುದ್ದ ಮಂಗಳೂರು ಭಜರಂಗದಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದೆ. ವಿಪಕ್ಷ ನಾಯಕ ಆರ್‌‌.ಅಶೋಕ್​ಗೆ ಭಜರಂಗದಳ ಮಂಗಳೂರು ವಿಭಾಗ ಸಹಸಂಯೋಜಕ ಪುನೀತ್ ಅತ್ತಾವರ ತನ್ನ ಫೇಸ್ ಬುಕ್ ಖಾತೆಯಲ್ಲಿ ಬಹಿರಂಗ ಎಚ್ಚರಿಕೆ ನೀಡಿದ್ದು, ಮಂಗಳೂರು ಭಜರಂಗದಳ ಕಾರ್ಯಕರ್ತರ ಪ್ರತಿರೋಧ ಎದುರಿಸಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

 

ನೀವು ಆರ್ ಅಶೋಕ್ ಅಲ್ಲ.. ನಿಮ್ಮ ಹೆಸರನ್ನು ಎ ಅಶೋಕ್ ಅಂತ ಬದಲಾಯಿಸಿ ಬಿಡಿ. ಅಡ್ಜಸ್ಟ್ ಮೆಂಟ್ ಅಶೋಕ್ ಅವರೇ.. ನಿಮ್ಮ ನಾಲಗೆಯನ್ನು ನಾಲಗೆ ರೀತಿಯಲ್ಲಿ ಬಳಸಿ, ಎಕ್ಕಡದ ರೀತಿ ಬಳಸಿಕೊಳ್ಳಬೇಡಿ. ಅಡ್ಜಸ್ಟ್ ಮೆಂಟ್ ರಾಜಕಾರಣ ಎಂಬ ಕೊಚ್ಚೆಯಲ್ಲಿ ಹೊರಳಾಡುತ್ತಿರುವ ನಿಮಗೆ ಭಜರಂಗದಳದ ಕಾರ್ಯಕರ್ತರ ಹೆಸರು ಎತ್ತಲೂ ಯೋಗ್ಯತೆಯಿಲ್ಲ. ಪ್ರತಿಪಕ್ಷ ನಾಯಕನಾಗಿರುವ ನೀವು ಒಂದಲ್ಲ ಒಂದು ದಿನ ಮಂಗಳೂರಿಗೆ ಬಂದೇ ಬರುತ್ತೀರಿ. ಹಿಂದೂ ವಿರೋಧಿ ಕೃತ್ಯಕ್ಕೆ ಪ್ರತಿರೋಧ ಒಡ್ಡಿ ಹೋರಾಡುವ ನಮಗೆ ನೀವೊಬ್ಬರು ಹೆಚ್ಚಾಗುವುದಿಲ್ಲ. ಭಜರಂಗದಳದ ಕಾರ್ಯಕರ್ತರ ಬಗ್ಗೆ ಆಡಿದ ಮಾತುಗಳನ್ನು ಹಿಂದೆ ಪಡೆಯಿರಿ. ಇಲ್ಲದಿದ್ದರೆ ಭಜರಂಗದಳದ ಕಾರ್ಯಕರ್ತರ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ ಎಂದು ಭಜರಂಗದಳ ಮುಖಂಡ ಪುನೀತ್ ಫೇಸ್​ಬುಕ್ ಮೂಲಕ ಆರ್.ಅಶೋಕ್​ಗೆ ಎಚ್ಚರಿಕೆ ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್​ಗೆ ಬುದ್ದಿ ಹೇಳೋ ಭರದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ನಿನ್ನೆ ನಡೆದ ಅಧಿವೇಶನದಲ್ಲಿ ಮಂಗಳೂರು ಪಬ್ ದಾಳಿ ಬಗ್ಗೆ ಮಾತನಾಡಿದ್ದರು. ಪಬ್ ದಾಳಿ ವೇಳೆ ನಾನು ರಾಜ್ಯದ ಗೃಹ ಸಚಿವನಾಗಿದ್ದೆ. ಅವತ್ತು ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ. ನಾನು ಯಾವುದೇ ಒತ್ತಡಕ್ಕೆ ಮಣಿಯದೇ ಪಬ್ ದಾಳಿ ಮಾಡಿದ್ದ ಭಜರಂಗದಳದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಅಶೋಕ್​ ಅವರ ಈ ಹೇಳಿಕೆಗೆ ಭಜರಂಗದಳದ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here