28ನೇ ವರ್ಷದ ಡಾ.ಎಂ.ವಿ ಶೆಟ್ಟಿ ಮೆಮೋರಿಯಲ್ ಕಪ್ – ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾಟ

ಮಂಗಳೂರು: 28ನೇ ವರ್ಷದ ಡಾ.ಎಂ.ವಿ ಶೆಟ್ಟಿ ಮೆಮೋರಿಯಲ್ ಕಪ್ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾಟ ಫೆ.23ರಂದು ಮಂಗಳೂರಿನ ಎನ್‌ಎಂಪಿಟಿ ಮೈದಾನದಲ್ಲಿ ನಡೆಯಿತು. ಅಂತರ್ ಫಿಸಿಯೋಥೆರಫಿ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಾಟವನ್ನು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಹೆಚ್.ಆರ್ ತಿಮ್ಮಯ್ಯ ಉದ್ಘಾಟಿಸಿದರು.

ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಬೆಂಗಳೂರಿನ ಕೆಟಿಜಿ ಕಾಲೇಜ್ ತಂಡ ವಿಜೇತರಾಗಿದ್ದು, ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜು ರನ್ನರ್ಸ್‌ ಆಗಿ ಹೊರಹೊಮ್ಮಿದೆ.

ಮಹಿಳಾ ವಿಭಾಗದಲ್ಲಿ ಮಂಗಳೂರಿನ ಯೆನಪೋಯ ಕಾಲೇಜು ಮಹಿಳಾ ತಂಡ ವಿಜೇತರಾಗಿದ್ದು, ಮಂಗಳೂರಿನ ಶ್ರೀನಿವಾಸ್ ಕಾಲೇಜು ಮಹಿಳಾ ತಂಡ ರನ್ನರ್ಸ್‌ ಆಗಿ ಹೊರಹೊಮ್ಮಿದೆ. ಡಾ. ಎಂ.ವಿ ಶೆಟ್ಟಿ ಮೆಮೋರಿಯಲ್‌ ಟ್ರಸ್ಟ್‌ ನ ಟ್ರಸ್ಟಿ ಡಾ. ದಿವ್ಯಾಂಜಲಿ ಶೆಟ್ಟಿ ಇನ್ನೋರ್ವ ಟ್ರಸ್ಟಿ ರೋಹಿಲಾ ಶೆಟ್ಟಿ ಉಪಸ್ಥಿತಿಯಲ್ಲಿ ಬಹುಮಾನ ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here