ಏಣಿಯಲ್ಲಿ ನಿಂತು ಪೈಂಟ್ ಮಾಡುತ್ತಿದ್ದ ಯುವಕ – ಆಯತಪ್ಪಿ ಜಾರಿ ಬಿದ್ದು ಮೃತ್ಯು

ಮಂಗಳೂರು: ಕಟ್ಟಡವೊಂದರ ಎರಡನೇ ಮಹಡಿಯಲ್ಲಿ ಪೈಂಟಿಂಗ್ ಮಾಡುತ್ತಿದ್ದ ಯುವಕ ಆಯತಪ್ಪಿ ಏಣಿಯ ಸಹಿತ ರಸ್ತೆಗೆ ಬಿದ್ದು  ಸ್ಥಳದಲ್ಲೇ ಮೃತಪಟ್ಟ ಘಟನೆ ಶಕ್ತಿನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಕುಡುಪು ಕೊಂಚಾಡಿ ನಿವಾಸಿ ಮೋಹಿತ್ ಪೂಜಾರಿ(26) ಎಂದು ಗುರುತಿಸಲಾಗಿದೆ.

ಮೋಹಿತ್ ಪೂಜಾರಿ ಮಂಗಳೂರಿನ ಶಿವ ಎಂಡ್ ಡೆಕೋರೇಟರ್ಸ್ ಮಾಲಕ ಚಂದ್ರಶೇಖರ್ ಅವರ ಮನೆಯಲ್ಲಿ 15 ದಿನಗಳಿಂದ ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಫೆ.24ರಂದು ಮೋಹಿತ್ ಮತ್ತು ದೀಪಕ್ ಎರಡನೇ ಮಹಡಿಯಲ್ಲಿ ಹೊರಭಾಗದ ಗೋಡೆಗೆ ಪೈಂಟ್ ಮಾಡುತ್ತಿದ್ದಾಗ ಏಣಿ ಜಾರಿ ಹೊರಕ್ಕೆ ಬಿದ್ದಿದೆ. ಮೋಹಿತ್ ಹೊರಭಾಗದ ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಮೋಹಿತ್ ಕೊನೆಯುಸಿರೆಳೆದಿದ್ದಾರೆ. ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here