ಮಂಗಳೂರು: ಕರ್ನಾಟಕ ಗಜೆಟೆಡ್ ಪ್ರೊಬೇಷನರ್ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ನಿಯಮಗಳು 1997 ಹಾಗೂ ಕಾಲಕಾಲಕ್ಕೆ ತಿದ್ದುಪಡಿಯಾದ ನಿಯಮಗಳಡಿ ಗಜೆಟೆಡ್ ಪ್ರೊಬೇಷನರಿ 2023-24ನೇ ಸಾಲಿನ ಹುದ್ದೆಗಳನ್ನು ಭರ್ತಿ ಮಾಡಲು ಆಯೋಗವು ನಡೆಸುವ ಪೂರ್ವಭಾವಿ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಗ್ರೂಪ್ A – 159, ಗ್ರೂಪ್ B – 225 ಸೇರಿದಂತೆ ಒಟ್ಟು 384 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರೂಪ್ ಎ ಹುದ್ದೆಗಳು
ಸಹಾಯಕ ಆಯುಕ್ತರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ
ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ
ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಡಿವೈಎಸ್‌ಪಿ, ಒಳಾಡಳಿತ ಇಲಾಖೆ
ಸಹಾಯಕ ನಿರ್ದೇಶಕರು ಗ್ರೇಡ್ -1, ಸಮಾಜ ಕಲ್ಯಾಣ ಇಲಾಖೆ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ/ ಸಹಾಯಕ ನಿರ್ದೇಶಕರು/ ಪ್ರಾಂಶುಪಾಲರು
PETC, ಹಿಂದುಳಿದ ವರ್ಗಗಳ ಇಲಾಖೆ
ಗ್ರೂಪ್ ಬಿ ಹುದ್ದೆಗಳು
ತಹಶೀಲ್ದಾರರು, ಗ್ರೇಡ್ 2, ಕಂದಾಯ ಇಲಾಖೆ
ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ
ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ
ಸಹಾಯಕ ಅಧೀಕ್ಷಕರು, ಒಳಾಡಳಿತ ಇಲಾಖೆ(ಬಂಧೀಖಾನೆ)
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆ
ಸಹಾಯಕ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ
ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ(ಅಬಕಾರಿ)
ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಮುಖ್ಯಾಧಿಕಾರಿ ಗ್ರೇಡ್ -1, ನಗರಾಭಿವೃದ್ಧಿ ಇಲಾಖೆ
ಸಹಾಯಕ ಖಜಾನಾಧಿಕಾರಿ, ಆರ್ಥಿಕ ಇಲಾಖೆ (ಖಜಾನೆ )
ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
ಶಾಖಾಧಿಕಾರಿ, ಕರ್ನಾಟಕ ಸರ್ಕಾರದ ಸಚಿವಾಲಯ
ಸಹಾಯಕ ನಿರ್ದೇಶಕರು, ಗ್ರೇಡ್ 2, ಸಮಾಜ ಕಲ್ಯಾಣ ಇಲಾಖೆ
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಆರಂಭದ ದಿನ – 04-03-2024, ಅರ್ಜಿ ಸಲ್ಲಿಸಲು ಕೊನೆಯ ದಿನ 03-04-2024, ಪೂರ್ವಭಾವಿ ಪರೀಕ್ಷಾ ದಿನ (ಅಂದಾಜು) – 05-05-2024
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತೊಂದರೆಗಳು ಎದುರಾದಲ್ಲಿ ಈ ಕೆಳಕಂಡ ಹೆಲ್ಪ್ ಲೈನ್ ನಂಬರ್ ಅನ್ನು ಸಂಪರ್ಕಿಸಲು ಸೂಚಿಸಿದೆ: Help Line: 080-30574957/ 30574901. ಅರ್ಜಿಗಳಿಗಾಗಿ ಸುದ್ದಿ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿ.