ಮಾಜಿ ಐಎಎಸ್ ಅಧಿಕಾರಿ, ಹಿರಿಯ ನಟ ಕೆ ಶಿವರಾಮ್​ಗೆ ಅನಾರೋಗ್ಯ-ಐಸಿಯುನಲ್ಲಿ ಚಿಕಿತ್ಸೆ

ಮಂಗಳೂರು: ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾಜಿ ಐಎಎಸ್ ಅಧಿಕಾರಿ ನಟ ಕೆ ಶಿವರಾಮ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ಎಚ್​ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ ಶಿವರಾಮ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವರಾಮ್ ಅವರ ಅಳಿಯ ಭರತ್ ನೀಡಿರುವ ಮಾಹಿತಿಯಂತೆ, 20 ದಿನಗಳ ಹಿಂದೆ ರಕ್ತದೊತ್ತಡದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕೆ ಶಿವರಾಮ್ ಅವರಿಗೆ 71 ವರ್ಷ ವಯಸ್ಸಾಗಿದ್ದು, ಇಂದು (ಫೆಬ್ರವರಿ 28) ಅವರಿಗೆ ಹೃದಯಾಘಾತವಾಗಿದೆ. ಇದೀಗ ಆರೋಗ್ಯ ಚಿಂತಾಜನಕ ಆಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎನ್ನಲಾಗಿದ್ದು, ಶಿವರಾಮ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂಬ ಸುದ್ದಿಯು ಹರಡಿದೆ. ಆದರೆ ಇದನ್ನು ದೃಡಪಡಿಸಲಾಗಿಲ್ಲ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.

ಕೆ ಶಿವರಾಮ್ ಅವರು ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ನಿವೃತ್ತರಾದ ಬಳಿಕ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಕೆ ಶಿವರಾಮ್, 2013 ರಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು, ಬಳಿಕ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು, 2016ರ ಬಳಿಕ ಬಿಜೆಪಿ ಪಕ್ಷ ಸೇರಿದ್ದರು. ಇದಲ್ಲದೆ, ಛಲವಾದಿ ಮಹಾಸಭಾದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಬಾ ನಲ್ಲೆ ಮಧು ಚಂದ್ರಕೆ’, ‘ವಸಂತಕಾವ್ಯ’, ‘ಖಳನಾಯಕ’, ‘ಯಾರಿಗೆ ಬೇಡ ದುಡ್ಡು’, ‘ಗೇಮ್ ಫಾರ್ ಲವ್’, ‘ನಾಗ’, ‘ಓ ಪ್ರೇಮ ದೇವತೆ’, 2007ರಲ್ಲಿ ಬಿಡುಗಡೆ ಆದ ‘ಟೈಗರ್’ ಸಿನಿಮಾಗಳಲ್ಲಿ ನಟಿಸಿರುವ ಇವರು 2007ರ ಬಳಿಕ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

LEAVE A REPLY

Please enter your comment!
Please enter your name here