ತಮಿಳುನಾಡಿನಲ್ಲಿ ರೋಡ್ ಶೋ ವೇಳೆ ಪ್ರಧಾನಿ ವಾಹನದ ಮೇಲೆ ಹೂ ಜೊತೆ ಮೊಬೈಲ್ ಎಸೆತ

ಮಂಗಳೂರು(ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರ ತಮಿಳುನಾಡು ಭೇಟಿ ವೇಳೆಯಲ್ಲಿ ಭದ್ರತಾ ವೈಫಲ್ಯವಾಗಿದೆ. ತಿರುಪುರದಲ್ಲಿ ರೋಡ್ ಶೋ ವೇಳೆ ಪ್ರಧಾನಿಯವರಿದ್ದ ವಾಹನವನ್ನು ಗುರಿಯಾಗಿಸಿ ಮೊಬೈಲ್ ಪೋನ್ ಎಸೆಯಲಾಗಿದೆ.

ಪ್ರಧಾನಿ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದು ಕೇರಳದಲ್ಲಿ ನಡೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ ನಂತರ ತಿರುಪುರದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ‘ಎನ್ ಮಣ್ ಎನ್ ಮಕ್ಕಳ್’​ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿ‌ದ್ದರು. ತೆರೆದ ವಾಹನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ಹಾಗೂ ಅಣ್ಣಾಮಲೈ ಸೇರಿದಂತೆ ಮತ್ತಿತರರಿಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಸಾರ್ವಜನಿಕರು ಪ್ರಧಾನಿ ಮೋದಿಯವರಿಗೆ ಸ್ವಾಗತ ಕೋರಿದರು.

ರೋಡ್ ಶೋ ವೇಳೆ ಜನಸಂದಣಿಯಿಂದ ಪ್ರಧಾನಿ ಮೋದಿಯವರ ವಾಹನದ ಮೇಲೆ ಸೆಲ್ ಫೋನ್ ಎಸೆಯಲಾಗಿದೆ. ಇದನ್ನು ಕಂಡ ಪಕ್ಕದಲ್ಲಿದ್ದ ಎಲ್.ಮುರುಗನ್ ಬೆಚ್ಚಿಬಿದ್ದರು. ಪ್ರಧಾನಿಯೂ ಈ ವೇಳೆ ಮೊಬೈಲ್ ಗಮನಿಸಿದ್ದಾರೆ. ಮೊಬೈಲ್ ಎಸೆದಿರುವ ವಿಡಿಯೋ ರೆಕಾರ್ಡ್ ಆಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ, ತಮಿಳುನಾಡು ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here