ಸುಳ್ಯದ ವಸತಿಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮಂಗಳೂರು(ಸುಳ್ಯ): ಸುಳ್ಯದ ಜೂನಿಯರ್ ಕಾಲೇಜು ರಸ್ತೆ ಬಳಿಯ ವಸತಿಗೃಹವೊಂದರಲ್ಲಿ ವ್ಯಕ್ತಿಯೊಬ್ಬರು‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಮಧ್ಯ ವಯಸ್ಕನಾಗಿದ್ದು ಪೈಚಾರ್ ಮೂಲದ ನಿವಾಸಿ ಇಸಾಕ್ ಎಂದು ಗುರುತಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾ.2ರಂದು ವಸತಿಗೃಹಕ್ಕೆ ಇಸಾಕ್ ಬಂದಿದ್ದರೆನ್ನಲಾಗಿದ್ದು. ಭಾನುವಾರ ಕೂಡ ಅವರು ಅಲ್ಲಿ ತೆರಳುತ್ತಿದ್ದುದ್ದನ್ನು ಜನ ನೋಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

LEAVE A REPLY

Please enter your comment!
Please enter your name here