ವಿಮಾನದಿಂದ ಜನರ ಮೈಮೇಲೆ ಬಿದ್ದ ಆಹಾರ ಪೊಟ್ಟಣಗಳು-5 ಮಂದಿ ಸಾವು

ಮಂಗಳೂರು(ಗಾಜಾ): ಪ್ಯಾರಾಚೂಟ್ ಮೂಲಕ ಗಾಜಾದಲ್ಲಿರುವ ಜನರಿಗೆ ಆಹಾರ, ಔಷಧಗಳನ್ನು ವಿತರಿಸುವ ಸಂದರ್ಭದಲ್ಲಿ ಅವಘಡ ನಡೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ ಜನರಿಗೆ ಆಹಾರ ವಿತರಿಸುವ ಸಮಯದಲ್ಲಿ ಪೊಟ್ಟಣಗಳು ನೇರವಾಗಿ ಜನರ ಮೇಲೆ ಬಿದ್ದು ಐವರು ಸಾವನ್ನಪ್ಪಿದ್ದಾರೆ.

ಅಲ್-ಶಾತಿ ಕರಾವಳಿ ನಿರಾಶ್ರಿತರ ಶಿಬಿರದ ಬಳಿ ಶುಕ್ರವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪ್ಯಾರಾಚೂಟ್ ವಿಫಲಗೊಂಡು ಪರಿಹಾರ ಪೊಟ್ಟಣಗಳು ಕೆಳಗೆ ನಿಂತ ನಾಗರಿಕರ ಮೇಲೆ ಬಿದ್ದು ಸುಮಾರು ಐದು ಮಂದಿ ಮೃತಪಟ್ಟಿದ್ದಾರೆ ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗಾಜಾ ನಗರದ ನಿರಾಶ್ರಿತರ ಶಿಬಿರದ ಬಳಿ ನಾಗರಿಕರು ಪರಿಹಾರದ ಪ್ಯಾಕೇಜ್‌’ಗಳಿಗಾಗಿ ಕಾಯುತ್ತಿದಾಗ ಈ ಅವಘಡ ಸಂಭವಿಸಿದೆ. ಪ್ಯಾರಾಚೂಟ್ ತೆರೆಯದೇ ರಾಕೆಟ್‌ನಂತೆ ಕೆಳಗೆ ಬಿದ್ದಿದ್ದು ಕೆಳಗೆ ಆಹಾರಕ್ಕಾಗಿ ಕಾಯುತ್ತಿದ್ದ ಐದು ಮಂದಿ ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆಯನ್ನು ಗಾಜಾ ಸರ್ಕಾರದ ಮಾಧ್ಯಮ ಕಚೇರಿ ದೃಢಪಡಿಸಿದೆ.

 

LEAVE A REPLY

Please enter your comment!
Please enter your name here